ನವದೆಹಲಿ : ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಬ್ಬ ಶಂಕಿತನನ್ನು ಬಂಧಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ಶಂಕಿತ ಇರ್ಪಾನ್ ಅಹ್ಮದ್ ವಾಗೆ ಅಲಿಯಾಸ್ ಮೌಲ್ವಿ ಇಮಾಮ್ ನನ್ನು ಬಂಧಿಸಲಾಗಿದೆ.
ಇರ್ಫಾನ್ ಸ್ಥಳೀಯ ಮಸೀದಿಯಲ್ಲಿ ಇಮಾಮ್ ಆಗಿ ಸೇವೆ ಸಲ್ಲಿಸುತ್ತಿದ್ದ ಫರಿದಾಬಾದ್ ಪ್ರಕರಣದ ಮೊದಲ ಆರೋಪಿಯಾಗಿರುವ ಇರ್ಫಾನ್ ಬಳಿ 5 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಸದ್ಯ ಇರ್ಫಾನ್ ಪತ್ನಿಯನ್ನು ವಶಕ್ಕೆ ಪಡೆದು ಎನ್ ಐಎ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.








