ನವದೆಹಲಿ : ಜಸ್ಪ್ರೀತ್ ಬುಮ್ರಾ ಅವರು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನ ಹಿಂದಿಕ್ಕಿ ಐಸಿಸಿ ಟೆಸ್ಟ್ ಕ್ರಿಕೆಟ್ನಲ್ಲಿ ನಂ.1 ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಟೆಸ್ಟ್ ಬೌಲಿಂಗ್ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನಕ್ಕೇರಿದ ಭಾರತದ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ಬುಮ್ರಾ ಪಾತ್ರರಾಗಿದ್ದಾರೆ.
India pacer tops the bowling charts in ICC Men’s Test Player Rankings for the first time 🤩https://t.co/FLqiGNGUTr
— ICC (@ICC) February 7, 2024
ಬುಮ್ರಾ ವೈಜಾಗ್ನಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನ ನೀಡಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ರಿಂದ ಸಮಬಲಗೊಳಿಸಲು ಭಾರತಕ್ಕೆ ಸಹಾಯ ಮಾಡಿದರು. ಶಾಂತವಾಗಿಯೇ, ಒಂಬತ್ತು ವಿಕೆಟ್ ಸಾಧನೆ ಮಾಡಿದರು. ಈ ಮೂಲಕ ಪ್ಯಾಟ್ ಕಮಿನ್ಸ್, ರಬಾಡ ಮತ್ತು ರವಿಚಂದ್ರನ್ ಅಶ್ವಿನ್ ಅವರನ್ನ ಹಿಂದಿಕ್ಕಿದರು.
ಅಂದ್ಹಾಗೆ, ಸ್ಪಿನ್ನರ್ಗಳಾದ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಬಿಷನ್ ಸಿಂಗ್ ಬೇಡಿ ನಂತರ ನಂ.1 ಸ್ಥಾನವನ್ನ ಪಡೆದ ನಾಲ್ಕನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
BREAKING: ಪಾಕಿಸ್ತಾನದಲ್ಲಿ ‘ಭೀಕರ ಬಾಂಬ್’ ಸ್ಪೋಟ: 15ಕ್ಕೂ ಹೆಚ್ಚು ಜನರು ಸಾವು, ಹಲವರಿಗೆ ಗಾಯ
BREAKING: 135 ದಿನಗಳ ಕಾಲ ಮೂರು ಹಂತದ ‘ಕದನ ವಿರಾಮ’ ಘೋಷಿಸಿದ ‘ಹಮಾಸ್’ | Israel-Hamas War
‘ಲೋಕಸಭೆ ಚುನಾವಣೆ’ಯಲ್ಲಿ ‘ಕಾಂಗ್ರೆಸ್ 40 ಸ್ಥಾನ’ಗಳನ್ನು ದಾಟುವುದಿಲ್ಲ- ಪ್ರಧಾನಿ ಮೋದಿ ಭವಿಷ್ಯ