ನವದೆಹಲಿ : ತ್ರಿಪುರಾದ ಇಂಡೋ-ಬಾಂಗ್ಲಾದೇಶ ಗಡಿಯಲ್ಲಿ ಭಾರತೀಯ ಯೋಧರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 13,000 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ತ್ರಿಪುರಾದ ಸೆಪಾಹಿಜಾಲಾ ಜಿಲ್ಲೆಯ ಗಡಿ ಹೊರಠಾಣೆ (ಬಿಒಪಿ) ಎನ್ ಸಿ ನಗರದ ಬಳಿ ಡಿಸೆಂಬರ್ 4, 2024 ರ ಸಂಜೆ 81 ಬೆಟಾಲಿಯನ್ ಬಿಎಸ್ ಎಫ್ ಈ ಕಾರ್ಯಾಚರಣೆಯನ್ನು ನಡೆಸಿದ್ದು, ಈ ವೇಳೆ 172.828 ಕೆಜಿ ಬೆಲೆ ಬಾಳುವ ಚಿನ್ನ, 178,805 ಕೆಜಿ ಬೆಲೆ ಬಾಳುವ ಬೆಳ್ಳಿ ಜಪ್ತಿ ಮಾಡಿಕೊಳ್ಳಲಾಗಿದೆ.
ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಬಿಎಸ್ಎಫ್ ಪಡೆಗಳು ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ದಾಳಿ ನಡೆಸಿದವು. ರಾತ್ರಿ 8:45 ರ ಸುಮಾರಿಗೆ, ಗಡಿ ಬೇಲಿಯ ಬಳಿ ಅನುಮಾನಾಸ್ಪದ ಚಲನವಲನಗಳನ್ನು ಅವರು ಗಮನಿಸಿದರು. ಇದನ್ನು ಪ್ರಶ್ನಿಸಿದಾಗ, ಶಂಕಿತ ಕಳ್ಳಸಾಗಣೆದಾರರು ಓಡಿಹೋದರು. ಶಂಕಿತರು ತಪ್ಪಿಸಿಕೊಂಡರೂ, ಜಾಗರೂಕ ಬಿಎಸ್ಎಫ್ ಸಿಬ್ಬಂದಿ ಈ ಪ್ರದೇಶದಲ್ಲಿ ಸಮಗ್ರ ಶೋಧ ನಡೆಸಿದರು, ಈ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದಾರೆ.
ವಶಪಡಿಸಿಕೊಂಡ ವಸ್ತುಗಳಲ್ಲಿ ಚಿನ್ನದ ಗಟ್ಟಿಗಳು, ಬಿಸ್ಕತ್ತುಗಳು ಸೇರಿವೆ, ವಶಪಡಿಸಿಕೊಂಡ ಚಿನ್ನವನ್ನು ಹೆಚ್ಚಿನ ತನಿಖೆ ಮತ್ತು ಕಾನೂನು ಕ್ರಮಕ್ಕಾಗಿ ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.