ನವದೆಹಲಿ : ಆರ್ ಜಿ ಕಾರ್ ಆಸ್ಪತ್ರೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (CBI) ಸಂಜಯ್ ರಾಯ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.
ಆಗಸ್ಟ್ 9 ರಂದು ಆಸ್ಪತ್ರೆಯಲ್ಲಿ ತರಬೇತಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಂಜಯ್ ರಾಯ್ ವಿರುದ್ಧ ಆರೋಪ ಹೊರಿಸಲಾಗಿದೆ.
ಆಸ್ಪತ್ರೆಯ ಸೆಮಿನಾರ್ ಕೋಣೆಯಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿತ್ತು. ಅಂದ್ಹಾಗೆ ಸಂತ್ರಸ್ತೆ ವೈದ್ಯೆ, ಆಸ್ಪತ್ರೆಯಲ್ಲಿ ಮ್ಯಾರಥಾನ್ ಶಿಫ್ಟ್ ನಡುವೆ ವಿಶ್ರಾಂತಿ ಪಡೆಯಲು ಕೋಣೆಗೆ ಹೋಗಿದ್ದಳು. ಆಗ ಮರುದಿನ ಬೆಳಿಗ್ಗೆ ಕಿರಿಯ ವೈದ್ಯರು ಆಕೆಯ ಶವವನ್ನ ಕಂಡುಕೊಂಡರು.
ವೈದ್ಯೆಯ ಮರಣೋತ್ತರ ವರದಿಯ ಪ್ರಕಾರ, ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ಶವಪರೀಕ್ಷೆಯಲ್ಲಿ ಆಕೆಯ ದೇಹದ ಮೇಲೆ 25 ಆಂತರಿಕ ಮತ್ತು ಬಾಹ್ಯ ಗಾಯಗಳು ಕಂಡುಬಂದಿವೆ.
ಅಂದ್ಹಾಗೆ, ಸಂಜಯ್ ರಾಯ್ ಕೋಲ್ಕತಾ ಪೊಲೀಸರ ಸಿವಿಲ್ ಸ್ವಯಂಸೇವಕನಾಗಿದ್ದು, ಆಗಾಗ್ಗೆ ಆಸ್ಪತ್ರೆಗೆ ಹೋಗುತ್ತಿದ್ದ.
ಜಾತಿಗಣತಿ ವರದಿ ಇಟ್ಟುಕೊಂಡು ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿ: HDK ಸವಾಲು
ಇಂದು 2024ನೇ ಸಾಲಿನ ‘ವೈದ್ಯಕೀಯ ನೊಬೆಲ್ ಪ್ರಶಸ್ತಿ’ ಪ್ರಕಟ | Nobel Prize