ಚಿತ್ತಾಪುರ : ಚಿತ್ತಾಪುರ ಕ್ಷೇತ್ರದಲ್ಲಿ ಇಂದು ಆರ್ ಎಸ್ಎಸ್ ಪಥಸಂಚಲನಕ್ಕೆ ಬ್ರೇಕ್ ಹಾಕಲಾಗಿದ್ದು, ಆರ್ ಎಸ್ ಎಸ್ ಪಥಸಂಚಲನಕ್ಕೆ ತಹಶೀಲ್ದಾರ್ ನಾಗಯ್ಯ ಹಿರೇಮಠ ಅನುಮತಿ ನಿರಾಕರಿಸಿದ್ದಾರೆ.
ಈ ಮೇಲ್ಕಂಡ ವಿಷಯಕ್ಕೆ ಸಂಬಂದಿಸದಂತೆ ಉಲ್ಲೇಖಿತ (1) ರನ್ವಯ ತಾವು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ತುಂಬುತಿರುವ ಹಿನ್ನಲೆ ಹಾಗೂ ವಿಜಯದಶಮಿ ಉತ್ಸವದ ಹಿನ್ನಲೆಯಲ್ಲಿ ಚಿತ್ತಾಪೂರ ನಗರದಲ್ಲಿ ದಿನಾಂಕ; 19-10-2025 ರಂದು ಮಧ್ಯಾಹ್ನ 3-00 ಗಂಟೆಗೆ ತಾಲೂಕಿನ ಪಥ ಸಂಚಲನ ಹಾಗೂ ವಿಜಯದಶಮಿ ಕಾರ್ಯಕ್ರಮವನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದ್ದು, ಎಂದು ಮನವಿ ಪತ್ರದ ಮೂಲಕ ಅನುಮತಿ ನೀಡಬೇಕೇಂದು ವಿನಂತಿ ಪತ್ರ ಸಲ್ಲಿಸಿರುತ್ತಿರಿ.
ಪ್ರಯುಕ್ತ ತಮ್ಮ ಮನವಿಯಂತೆ ಉಲ್ಲೇಖಿತ (2) ರನ್ವಯ ಈ ಕಛೇರಿಯ ಪತ್ರದನ್ವಯ ವರದಿ ಸಲ್ಲಿಸಲು ಆರಕ್ಷಕ ಉಪ ನಿರೀಕ್ಷಕರು ಪೋಲಿಸ್ ಠಾಣೆ ಚಿತ್ತಾಪೂರ ರವರಿಗೆ ವರದಿ ಸಲ್ಲಿಸಲು ಪತ್ರ ಬರೆಯಲಾಗಿರುತ್ತದೆ.
ಅದರಂತೆ ಉಲ್ಲೇಖಿತ (3) ರನ್ವಯ ದಿನಾಂಕ; 19-10-2025 ರಂದು ಚಿತ್ತಾಪೂರ ಪಟ್ಟಣದಲ್ಲಿ ನಡೆಯುವ ಆರ್.ಎಸ್.ಎಸ್. ಸಂಘದ ವತಿಯಿಂದ ವಿಜಯ ದಶಮಿ ಉತ್ಸವದ ಪಥ ಸಂಚಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸದರಿ ಕಾರ್ಯಕ್ರಮವು ಗಣ ವೇಷದಾರಿಗಳು ನಗರದ ಪ್ರಮುಖ ಬೀದಿಗಳಾದ ಬಜಾಜ ಕಲ್ಯಾಣ ಮಂಟಪದಿಂದ ಆರಂಭಿಸಿ ಬಸ್ ನಿಲ್ದಾಣ, ಡಾ॥ ಬಿ.ಆರ್. ಅಂಬೇಡ್ಕರ ವೃತ್ತ, ಭುವನೇಶ್ವರಿ ವೃತ್ತ, ಪಾಲಪ್ ಗಲ್ಲಿ, ಹೋಳಿಕಟ್ಟಾ, ಬಸವೇಶ್ವರ ಚೌಕ, ಹಳೆಯ ಕಪಡ ಬಜಾರ ವೃತ್ತ, ಜನತಾ ಚೌಕ, ನಾಗವಿ ಚೌಕ, ಕಿಶೋರ ಬಜಾಜ್ ಚೌಕ ಮನೆ ಎದುರಿನಿಂದ ಸೇವಾಲಾಲ ಚೌಕ. ಪುರಸಭೆ ಕಾರ್ಯಾಲಯದ ಎದುರಿನಿಂದ ಹಳೆ ಗಂಜ ವೃತ್ತ, ಕಾಶಿಗಲ್ಲಿ, ಗಣೇಶ ಮಂದಿರ ಎದುರುಗಡೆಯಿಂದ ಕಾಶಿಗಲ್ಲಿ ಬಸ್ ನಿಲ್ದಾಣದ ಎದುರುಗಡೆಯಿಂದ ಲಾಡ್ಡಿಂಗ್ ಕ್ರಾಸ್ ಮೂಲಕ ಬಜಾಜ್ ಕಲ್ಯಾಣ ಮಂಟಪದವರಗೆ ಪಥ ಸಂಚಲನ ಮಾಡುವುದಾಗಿ ತಮ್ಮ ಉಲ್ಲೇಖಿತ ಪತ್ರದಲ್ಲಿ ನಮೂದಾಗಿದ್ದು ಇರುತ್ತದೆ ಹಾಗೂ ಭೀಮ್ ಆರ್ಮಿ ಸಂಘಟನೆಯವರೂ ಕೂಡ ಇದೇ ಮಾರ್ಗದಲ್ಲಿ ದಿನಾಂಕ: 19-10-2025 ರಂದು ಪಥ ಸಂಚಲನ ಮಾಡುವುದಾಗಿ ಪತ್ರದ ಮೂಲಕ ತಿಳಿಸಿರುತ್ತಾರೆ.
ಮುಂದುವರೆದೂ ಸದರಿ ಸಂಘಟನೆಗಳ ಪಥ ಸಂಚಲನ ಕಾರ್ಯಕ್ರಮದ ಮಾಹಿತಿಯನ್ನು ಸಂಗ್ರಹಿಸಿಕೊಂಡು ಬರಲು ನಮ್ಮ ಠಾಣೆ ಗುಪ್ತ ಮಾಹಿತಿ ಸಂಗ್ರಹಿಸುವ ದತ್ತಾತ್ರೇಯ ಪಿ.ಸಿ 88 ರವರಿಗೆ ಕಳುಹಿಸಿದಾಗ ಸದರಿ ರವರು ಮಾಹಿತಿ ಸಂಗ್ರಹಿಕೊಂಡು ಬಂದು ವರದಿ ಸಲ್ಲಿಸಿದ್ದೇನೆಂದರೆ ದಿನಾಂಕ; 16-10-2025 ರಂದು ಚಿತ್ತಾಪೂರ ಪಟ್ಟಣದಲ್ಲಿ ಆರ್.ಎಸ್.ಎಸ್. ಕಾರ್ಯಕರ್ತನಾದ ದಾನೇಶ ನರೋಣ ರವರು ಕೆಲವು ದಿನಗಳ ಹಿಂದೆ ಈ ಕ್ಷೇತ್ರ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರಾಂತಹ ಶ್ರೀ ಪ್ರಿಯಾಂಕ್ ಖರ್ಗೆ ರವರಿಗೆ ಅವಾಚ್ಯವಾಗಿ ನಿಂದಿಸಿ ಜೀವ ಬೇದರಿಕೆ ಹಾಕಿದ ಪ್ರಯುಕ್ತ ಬೆಂಗಳೂರಿನ ಸದಾಶಿನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಲ್ಲದೇ ಈ ಘಟನೆಯನ್ನು ಖಂಡಿಸಿ ಕರ್ನಾಟಕದ್ಯಂತ ಅಲ್ಲದೇ ಸಚಿವರು ತವರು ಕ್ಷೇತ್ರವಾದ ಚಿತ್ತಾಪೂರದಲ್ಲಿ ಕೂಡ ಬಂದ ಕರೆ ಕೊಟ್ಟು ಪತ್ರಿಭಟನೆ ಮಾಡಿರುತ್ತಾರೆ. ಇಂದು ದಿನಾಂಕ: 18-10-2025 ರಂದು ಭೀಮಾ ಅರ್ಮಿ ರಾಜ್ಯ ಯುವ ಘಟಕ ಕಲಬುರಗಿ ವತಿಯಿಂದ ದಿನಾಂಕ; 19-10-2025 ರಂದು ಚಿತ್ತಾಪೂರ ಪಟ್ಟಣ್ಣದಲ್ಲಿ ಆರ್.ಎಸ್.ಎಸ್ ನವರು ಸಚಿವರ ಹೇಳಿಕೆಯ ವಿರುದ್ದವಾಗಿ ಉದ್ದೇಶಪೂರ್ವಕವಾಗಿ ಪಥ ಸಂಚಲನ ಮಾಡುತ್ತಿದ್ದರಿಂದ ಭೀಮ್ ಆರ್ಮಿ ಸಂಘಟನೆಯ ಹಾಗೂ ಭಾರತೀಯ ದಲಿತ ಪ್ಯಾಂಥರ(ರಿ) ಸಂಘದ ಕಾರ್ಯಕರ್ತರು ಇದೇ ಮಾರ್ಗವಾಗಿ ಪಥ ಸಂಚಲನ ಮಾಡುವುದಾಗಿ ಅನುಮತಿ ನೀಡಬೇಕೆಂದು ಪತ್ರದ ಮೂಲಕ ಕೋರಿಕೊಂಡಿರುತ್ತಾರೆ, ಅಲ್ಲದೇ ಈಗಾಗಲೇ ಭೀಮ್ ಆರ್ಮಿ ರವರು ನಾಳೆ ಪಥಸಂಚಲನ ಮಾಡುವ ಸಲುವಾಗಿ ಪತ್ರಿಕಾಗೋಷ್ಠಿ ಕೂಡಾ ಮಾಡಿದ್ದು, ಭಾರತೀಯ ದಲಿತ ಪ್ಯಾಂಥರ(ರಿ) ಸಂಘದ ಕಾರ್ಯಕರ್ತರು ಕೂಡ ಮಾಡುವುದುಗಾಗಿ ಪತ್ರದ ಮೂಲಕ ಕೋರಿಕೊಂಡಿರುತ್ತಾರೆ.
ದಿನಾಂಕ; 19-10-2025 ರಂದು ಚಿತ್ತಾಪೂರ ಪಟ್ಟಣದಲ್ಲಿ ಆರ್.ಎಸ್.ಎಸ್ ನವರು ಹಾಗೂ ಭೀಮ್ ಅರ್ಮಿ ಸಂಘಟನೆ, ಭಾರತೀಯ ದಲಿತ ಪ್ಯಾಂಥರ (ರಿ) ಸಂಘದ ಕಾರ್ಯಕರ್ತರು ಪಥ ಸಂಚಲನ ಕೈಕೊಂಡರೇ ಎಲ್ಲಾ ಸಂಘಟನೆಗಳು ಒಟ್ಟಿಗೆಯಾಗಿ ಪಥ ಸಂಚಲನ ಮಾಡಿದ್ದಲ್ಲಿ ಸಂಘನೆಗಳ ಮಧ್ಯೆ ಯಾವುದಾರೂ ಗಂದಲ ಗಲಾಟೆಗಳಾಗಿ ಕಾನೂನು ಸುವ್ಯವಸ್ಥೆ ಹಾಳಗುವ ಸಾದ್ಯತೆ ಹೆಚ್ಚಾಗಿದ್ದರಿಂದ ಕಾನೂನು ಸುವ್ಯವಸ್ಥೆಗೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಅಂತಾ ಸಾರ್ವಜನಿಕರು ಹಾಗೂ ಪೋಲಿಸ್ ಬಾತ್ಮಿದಾರರಿಂದ ಮಾಹಿತಿ ಸಂಗ್ರಹಿಸಿಕೊಂಡು ಬಂದು ವರದಿ ಸಲ್ಲಿಸಿರುತ್ತಾರೆ.
ಆದ್ದರಿಂದ ದಿನಾಂಕ; 19-10-2025 ರಂದು ಚಿತ್ತಾಪೂರ ಪಟ್ಟಣದಲ್ಲಿ ಆರ್.ಎಸ್.ಎಸ್. ಹಾಗೂ ಭೀಮ್ ಆರ್ಮಿ ಸಂಘಟನೆ. ಭಾರತೀಯ ದಲಿತ ಪ್ಯಾಂಥರ(ರಿ) ಸಂಘದ ಕಾರ್ಯಕರ್ತರು ಪಥ ಸಂಚಲನ ಕಾರ್ಯಕ್ರಮ ಕೈಗೊಂಡರೇ ಒಬ್ಬರಿಗೊಬ್ಬರ ಮಧ್ಯೆ ಗದ್ದಲ ಗಲಟೆ ಆಗುವ ಸಾಧ್ಯತೆಗಳಾಗಿ ಕಾನೂನು ಸುವ್ಯವಸ್ಥೆಯ ಮೇಲೆ ಅಡ್ಡಪರಿಣಾಮ ಬೀರುವ ಸಂಭವ ಇರುವುದರಿಂದ ಪರವಾನಿಗೆ ನೀಡುವುದು ಸೂಕ್ತವಲ್ಲ ಅಂತಾ ಚಿತ್ತಾಪೂರ ಪೋಲಿಸ್ ಠಾಣೆ ರವರು ವರದಿ ಸಲ್ಲಿಸಿರುತ್ತಾರೆ.
ಪ್ರಯುಕ್ತ ಆರ್.ಎಸ್.ಎಸ್ ಪಥ ಸಂಚಲನದಿಂದಾಗಿ ಚಿತ್ತಾಪೂರ ಪಟ್ಟಣದಲ್ಲಿ ಶಾಂತಿ ಮತ್ತು ಕಾನೂನು ಸುವ್ಯಸ್ಥಗೆ ಭಂಗ ಉಂಟಾಗಬಹುದು ಹಾಗೂ ಅಹಿತಕರ ಘಟನೆ ನಡೆಯದಂತೆ ತಡೆಯಲು ದಿನಾಂಕ; 19-10-2025 ರಂದು ನಡೆಯುವ ಆರ್.ಎಸ್.ಎಸ್ ಪಥ ಸಂಚಲನಕ್ಕೆ ಅನುಮತಿ ನೀಡಲು ನಿರಾಕರಿಸಿ, ಹಾಗೂ ಮನವಿ ಅರ್ಜಿಯನ್ನು ತಿರಸ್ಕರಿಸಿ ಆದೇಶಿಸಿದೆ.