ಢಾಕಾ : ಬಾಂಗ್ಲಾದೇಶದಲ್ಲಿ ಇಸ್ಕಾನ್’ನ ಮಾಜಿ ಮುಖ್ಯಸ್ಥ ಚಿನ್ಮೋಯ್ ಕೃಷ್ಣ ದಾಸ್ ಬಂಧನ ಮತ್ತು ಹಿಂದೂಗಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯದ ನಡುವೆ ಇಸ್ಕಾನ್’ಗೆ ಸಂಬಂಧಿಸಿದ 17 ಜನರ ಬ್ಯಾಂಕ್ ಖಾತೆಗಳನ್ನ 30 ದಿನಗಳವರೆಗೆ ಸ್ಥಗಿತಗೊಳಿಸಲಾಗಿದೆ. ಇದರಲ್ಲಿ ಚಿನ್ಮೋಯ್ ಕೃಷ್ಣ ದಾಸ್ ಕೂಡ ಸೇರಿದ್ದಾರೆ. ಈ ಕುರಿತು ಬಾಂಗ್ಲಾದೇಶದ ಹಣಕಾಸು ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಸ್ಥಳೀಯ ಪ್ರೋಥೋಮ್ ಅಲೋ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಬಾಂಗ್ಲಾದೇಶ ಬ್ಯಾಂಕ್‌ನ ಹಣಕಾಸು ಗುಪ್ತಚರ ಘಟಕ (BFIU) ಗುರುವಾರ ವಿವಿಧ ಬ್ಯಾಂಕ್’ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸೂಚನೆಗಳನ್ನ ನೀಡಿದೆ, ಸಂಬಂಧಿತ ಖಾತೆಗಳಲ್ಲಿನ ಎಲ್ಲಾ ರೀತಿಯ ವಹಿವಾಟುಗಳನ್ನ ಒಂದು ತಿಂಗಳವರೆಗೆ ನಿಲ್ಲಿಸಲಾಗುವುದು ಎಂದು ಹೇಳಿದೆ.
ಮುಂದಿನ ಮೂರು ಕೆಲಸದ ದಿನಗಳಲ್ಲಿ ಈ 17 ಜನರ ಒಡೆತನದ ಎಲ್ಲಾ ರೀತಿಯ ಖಾತೆಗಳ ವಹಿವಾಟು ಸೇರಿದಂತೆ ಖಾತೆ ಮಾಹಿತಿಯನ್ನ ಕಳುಹಿಸಲು ಬ್ಯಾಂಕ್’ಗಳು ಮತ್ತು ಹಣಕಾಸು ಸಂಸ್ಥೆಗಳನ್ನ BFIU ಕೇಳಿದೆ.
ಹಿಂಗಾರಿನಲ್ಲಿ 1,58,087 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ, ಒಂದು ವಾರದಲ್ಲಿ ಪರಿಹಾರ: ಸಚಿವ ಕೃಷ್ಣ ಬೈರೇಗೌಡ
ಬಸವಣ್ಣನನ್ನು ಅವಮಾನಿಸಿದ ಬಸನಗೌಡ ಯತ್ನಾಳ್ ಮಾತುಗಳನ್ನು ಕಟುವಾಗಿ ಖಂಡಿಸಿದ ಸಚಿವ ಪ್ರಿಯಾಂಕ್ ಖರ್ಗೆ
Watch Video : ‘BCCI’ನಿಂದ ಏಕದಿನ ಪಂದ್ಯಗಳಿಗೆ ಟೀಂ ಇಂಡಿಯಾ ‘ಹೊಸ ಜರ್ಸಿ’ ಅನಾವರಣ