ನವದೆಹಲಿ: ಕಳೆದ ತಿಂಗಳು ಮುಂಬೈನ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಯಲ್ಲಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದ ಆರನೇ ಆರೋಪಿಯನ್ನು ಹರಿಯಾಣದಲ್ಲಿ ಬಂಧಿಸಲಾಗಿದೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸದಸ್ಯನಾದ ಆರನೇ ಆರೋಪಿಯನ್ನು ಮುಂಬೈ ಅಪರಾಧ ವಿಭಾಗ ಮಂಗಳವಾರ ಹರಿಯಾಣದ ಫತೇಹಾಬಾದ್ನಿಂದ ಬಂಧಿಸಿದೆ.
ಆರೋಪಿಯನ್ನು ಹರಿಯಾಣದ ಫತೇಹಾಬಾದ್ ನಿವಾಸಿ ಹರ್ಪಾಲ್ ಸಿಂಗ್ (34) ಎಂದು ಗುರುತಿಸಲಾಗಿದ್ದು, ಮುಂಬೈ ಅಪರಾಧ ವಿಭಾಗದ ತಂಡವು ಸೋಮವಾರ ಸಂಜೆ ಅವನ ಊರಿನಿಂದ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಂಗ್ ಅವರನ್ನು ಮಂಗಳವಾರ ಮುಂಜಾನೆ ಮುಂಬೈಗೆ ಕರೆತರಲಾಗಿದ್ದು, ನಂತರ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅವರು ಹೇಳಿದರು.
ಏಪ್ರಿಲ್ 14 ರಂದು ಮುಂಬೈನ ಬಾಂದ್ರಾ ಪ್ರದೇಶದ ಗ್ಯಾಲಕ್ಸಿ ಅಪಾರ್ಟ್ಮೆಂಟ್ನಲ್ಲಿರುವ ಖಾನ್ ಅವರ ನಿವಾಸದ ಹೊರಗೆ ಮೋಟಾರ್ಸೈಕಲ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದರು.