ಬೆರೂತ್: ಸಿರಿಯಾದಲ್ಲಿ ಮತ್ತೊಮ್ಮೆ ವಾಯುದಾಳಿ ನಡೆದಿದೆ. ಪೂರ್ವ ಸಿರಿಯಾದಲ್ಲಿ ನಡೆದ ಸರಣಿ ವೈಮಾನಿಕ ದಾಳಿಯಲ್ಲಿ ಇರಾನಿನ ಮಿಲಿಟರಿ ಸಲಹೆಗಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಾಗಿ ಕೆಲಸ ಮಾಡುವ ತಂಡದ ಸದಸ್ಯ ಸೇರಿದಂತೆ 15 ಜನರು ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇರಾಕ್ ಗಡಿಯಲ್ಲಿರುವ ಸಿರಿಯಾದ ಪೂರ್ವ ಪ್ರಾಂತ್ಯದ ದೇರ್ ಅಲ್-ಝೌರ್ನಲ್ಲಿ ನಡೆದ ವೈಮಾನಿಕ ದಾಳಿಯ ಹಿಂದೆ ಯಾರು ಇದ್ದಾರೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಈ ದಾಳಿಯಲ್ಲಿ ಇರಾನಿನ ಸಲಹೆಗಾರ, ಅವರ ಇಬ್ಬರು ಅಂಗರಕ್ಷಕರು, ಇರಾನ್ ಬೆಂಬಲಿತ ಗುಂಪಿನ ಒಂಬತ್ತು ಇರಾಕಿ ಹೋರಾಟಗಾರರು ಮತ್ತು ಇಬ್ಬರು ಸಿರಿಯನ್ನರು ಮತ್ತು ಸಿರಿಯನ್ ಎಂಜಿನಿಯರ್ ಸೇರಿದಂತೆ 15 ಜನರು ಸಾವನ್ನಪ್ಪಿದ್ದಾರೆ ಎಂದು ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.
ಇತ್ತೀಚೆಗೆ ಇಸ್ರೇಲಿ ಸೇನೆಯು ಸಿರಿಯಾ ಮೇಲೆ ರಾತ್ರಿಯಲ್ಲಿ ಅನೇಕ ನೆಲೆಗಳ ಮೇಲೆ ವಾಯು ದಾಳಿ ನಡೆಸಿತ್ತು. ಇಸ್ರೇಲಿ ಸೇನೆಯ ವೈಮಾನಿಕ ದಾಳಿಯಲ್ಲಿ ಸಿರಿಯಾದಲ್ಲಿನ ಅನೇಕ ಭಯೋತ್ಪಾದಕ ನೆಲೆಗಳು ನಾಶವಾಗಿವೆ. ಇಸ್ರೇಲ್ ಸೇನೆಯು ದಕ್ಷಿಣ ಸಿರಿಯಾದ ಹಲವಾರು ಸ್ಥಳಗಳಲ್ಲಿ ಏಕಕಾಲದಲ್ಲಿ ಈ ದಾಳಿಯನ್ನು ನಡೆಸಿತು. ಹಿಂದಿನ ದಾಳಿಯ ನಂತರ, ಬ್ರಿಟನ್ ಮೂಲದ ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ಪ್ರಕಾರ, ಡಮಾಸ್ಕಸ್ನ ಈಶಾನ್ಯದಲ್ಲಿರುವ ಕಲ್ಮೌನ್ ಪರ್ವತಗಳಲ್ಲಿನ ಎರಡು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ವಾಯು ದಾಳಿ ನಡೆಸಿದೆ. ಹಿಜ್ಬುಲ್ಲಾ ಹೋರಾಟಗಾರರು ಇಲ್ಲಿ ಹಾಜರಿದ್ದರು. ದಾಳಿಯಲ್ಲಿ ಕೊಲ್ಲುವ ಸಾಧ್ಯತೆಯೂ ಇತ್ತು.