ನವದೆಹಲಿ : ನವೆಂಬರ್ 13, ಗುರುವಾರ ಟೊರೊಂಟೊ-ದೆಹಲಿ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಬಿಟಿಎಸಿ (ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿ)ಯನ್ನು ತಕ್ಷಣವೇ ಕರೆಯಲಾಯಿತು. ಎರಡು ದಿನಗಳಲ್ಲಿ ಬೆದರಿಕೆ ಬಂದ ಎರಡನೇ ಏರ್ ಇಂಡಿಯಾ ವಿಮಾನ ಇದಾಗಿದ್ದು, ನಿನ್ನೆ ಅದು ಏರ್ ಇಂಡಿಯಾ ಎಕ್ಸ್‌ಪ್ರೆಸ್’ಗೆ ಬಂದಿತ್ತು.
“11:30 ಗಂಟೆಗೆ, ದೆಹಲಿ ಪೊಲೀಸ್ ಎಸ್‌ಎಚ್‌ಒ ಟಿ 3ಗೆ ಏರ್ ಇಂಡಿಯಾ ವಿಮಾನ AI-188 (ಟೊರೊಂಟೊ ದೆಹಲಿ ವಿಮಾನ) ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಹೇಳುವ ಬೆದರಿಕೆ ಮೇಲ್ ಬಂದಿದೆ. ಮೌಲ್ಯಮಾಪನದ ನಂತರ ಬೆದರಿಕೆಯನ್ನ ನಿರ್ದಿಷ್ಟವಲ್ಲದ ಎಂದು ವರ್ಗೀಕರಿಸಲಾಗಿದೆ. ಸಿಐಎಸ್‌ಎಫ್ ಮತ್ತು ಎಲ್ಲಾ ವಿಮಾನ ನಿಲ್ದಾಣದ ಪಾಲುದಾರರಿಗೆ ಭದ್ರತಾ ಕ್ರಮಗಳನ್ನು ಹೆಚ್ಚಿಸಲು ಸೂಚನೆ ನೀಡಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದ ಯುವಕನಿಗೆ ಮೊದಲ ಕ್ಯಾನ್ಸರ್ ಲಸಿಕೆ ; ಸಾವು ಜಯಸಲಿರುವ ಶ್ರೀವಾಸ್ತವ
ಉದ್ಯೋಗಸ್ಥ ಮಹಿಳೆಯರಿಗೆ ಮಾಸಿಕ 1 ದಿನ ವೇತನ ಸಹಿತ ಮುಟ್ಟಿನ ರಜೆ: ಕಾರ್ಮಿಕ ಇಲಾಖೆ ಆದೇಶ








