ನವದೆಹಲಿ: ಕಳೆದ ಕೆಲವು ದಿನಗಳಿಂದ ಸರಣಿ ಭದ್ರತಾ ಲೋಪಗಳನ್ನು ಎದುರಿಸುತ್ತಿರುವ ದೆಹಲಿ ವಿಧಾನಸಭೆಗೆ ಸೋಮವಾರ ಎರಡು ಬಾಂಬ್ ಬೆದರಿಕೆ ಇಮೇಲ್ಗಳು ಬಂದಿವೆ. ಇದು ರಾಜಧಾನಿಯಲ್ಲಿ ಆತಂಕದ ವಾತಾವರಣ ನಿರ್ಮಿಸಿದೆ.
ವಿಧಾನಸಭೆಯ ಸಚಿವಾಲಯದ ಅಧಿಕೃತ ಇಮೇಲ್ ಐಡಿ ಮತ್ತು ಸ್ಪೀಕರ್ ವಿಜೇಂದರ್ ಗುಪ್ತಾ ಅವರ ವೈಯಕ್ತಿಕ ಇಮೇಲ್ ಐಡಿಗೆ ಈ ಬೆದರಿಕೆ ಸಂದೇಶಗಳು ಬಂದಿವೆ.
ದ್ರಾವಿಡ ಮುನ್ನೇತ್ರ ಕಳಗಂ (DMK) ಪಕ್ಷಕ್ಕೆ ಎಸ್ ವಿ ಶೇಖರ್ ಅವರನ್ನು ‘ಬಿಜೆಪಿ ಬ್ರಾಹ್ಮಣ ಏಜೆಂಟ್’ ಆಗಿ ನಿಯೋಜಿಸಲಾಗಿದೆ ಎಂದು ಆರೋಪಿಸಿ, ಈ ಕಾರಣಕ್ಕಾಗಿ ವಿಧಾನಸಭೆಯನ್ನು ಸ್ಫೋಟಿಸುವುದಾಗಿ ಇಮೇಲ್ನಲ್ಲಿ ಎಚ್ಚರಿಸಲಾಗಿದೆ.
ಇಮೇಲ್ ಬಂದ ತಕ್ಷಣ ಎಚ್ಚೆತ್ತುಕೊಂಡ ಭದ್ರತಾ ಸಂಸ್ಥೆಗಳು ಮತ್ತು ಪೊಲೀಸರು ವಿಧಾನಸಭೆಯ ಆವರಣದಲ್ಲಿ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ. ಸದ್ಯಕ್ಕೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎನ್ನಲಾಗಿದೆ.








