ಚಾಮರಾಜನಗರ : ಚಾಮರಾಜನಗರ ಡಿಸಿ ಕಚೇರಿ ಸ್ಪೋಟಿಸುವುದಾಗಿ ದುಷ್ಕರ್ಮಿಗಳು ಇ-ಮೇಲ್ ಸಂದೇಶ ರವಾನಿಸಿದ್ದಾರೆ.
3 ಗಂಟೆಯೊಳಗೆ ಚಾಮರಾಜನಗರ ಡಿಸಿ ಕಚೇರಿ ಸ್ಪೋಟಿಸುವುದಾಗಿ ಅಪರಿಚಿತರು ಇ-ಮೇಲ್ ಸಂದೇಶ ರವಾನಿಸಿದ್ದಾರೆ. ಇ-ಮೇಲ್ ಸಂದೇಶದ ಬೆನ್ನಲ್ಲೇ ಚಾಮರಾಜನಗರ ಎಸ್ ಪಿ ಕವಿತಾಗೆ ಜಿಲ್ಲಾಡಳಿತ ಮಾಹಿತಿ ನೀಡಿದ್ದು, ಇ-ಮೇಲ್ ಬಗ್ಗೆ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.