ಪೇಶಾವರ : ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಬುಧವಾರ ರಿಮೋಟ್ ಕಂಟ್ರೋಲ್ ಬಾಂಬ್ ಸ್ಫೋಟಗೊಂಡ ಪರಿಣಾಮ ಕನಿಷ್ಠ ಐವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುನೇರ್ ಜಿಲ್ಲೆಯ ಕಂಕೋಯಿ ಮಂದ್ನಾರ್ ಪ್ರದೇಶದಲ್ಲಿ ಉಗ್ರರು ಸಂಚಾರಿ ಪೊಲೀಸ್ ವ್ಯಾನ್ ಗುರಿಯಾಗಿಸಿಕೊಂಡಿದ್ದಾರೆ.
ಈ ದಾಳಿಯಲ್ಲಿ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಐವರು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಭಾರಿ ಪೊಲೀಸ್ ತುಕಡಿ ಆಗಮಿಸಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಕಾವೇರಿ 5ನೇ ಹಂತದ ಶೇ 80 ರಷ್ಟು ಕೆಲಸ ನಾವೇ ಮಾಡಿದ್ದೇವೆ : ವಿಪಕ್ಷ ನಾಯಕ್ ಆರ್.ಅಶೋಕ್ ಹೇಳಿಕೆ
ಬೆಂಗಳೂರಲ್ಲಿ ವರುಣನ ಅಬ್ಬರಕ್ಕೆ ತತ್ತರಿಸಿದ ಶ್ವಾನಗಳು : ಊಟ ಸಿಗದೇ ಮಣ್ಣು ತಿನ್ನುತ್ತಿರುವ ಮೂಕ ಪ್ರಾಣಿಗಳು!
ಹುಸಿ ‘ಬೆದರಿಕೆ’ ಕಡಿವಾಣಕ್ಕೆ ‘ಕೇಂದ್ರ ಸರ್ಕಾರ’ ಖಡಕ್ ಕ್ರಮ ; ‘ಹಾರಾಟ ನಿಷೇಧ ಪಟ್ಟಿ’ಗೆ ಸೇರ್ಪಡೆ : ಮೂಲಗಳು