ನವದೆಹಲಿ: ಲೋಕಸಭಾ ಚುನಾವಣೆಗೆ BJP ಅಭ್ಯರ್ಥಿಗಳ ಪಟ್ಟಿ ಪ್ರಪ್ರಕಟ ಮಾಡಲಾಗಿದೆ. ಇಂದು ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ಬಿಜೆಪಿ ನಾಯಕರು ಬಿಡುಗಡೆ ಮಾಡಿದರು. ಹಾಗಾದ್ರೇ ಯಾರು ಎಲ್ಲಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವುದನ್ನು ನೋಡುವುದಾದ್ರೆ ಅದರ ವಿವರ ಈ ಕೆಳಕಂಡತಿದೆ.
BJP releases first list of 195 candidates for Lok Sabha elections pic.twitter.com/ms1zTtzLfL
— ANI (@ANI) March 2, 2024
ಪ್ರತಿ ರಾಜ್ಯದಲ್ಲಿ ಎಷ್ಟು ಸ್ಥಾನಗಳು
- ಉತ್ತರ ಪ್ರದೇಶ: 51 ಸ್ಥಾನಗಳು
- ಪಶ್ಚಿಮ ಬಂಗಾಳ: 20
- ಮಧ್ಯಪ್ರದೇಶ: 24
- ಗುಜರಾತ್: 15
- ರಾಜಸ್ಥಾನ: 15
- ಕೇರಳ: 12
- ತೆಲಂಗಾಣ: 9
- ಅಸ್ಸಾಂ: 11
- ಜಾರ್ಖಂಡ್: 11
- ಛತ್ತೀಸ್ ಗಢ: 11
- ದೆಹಲಿ: 5
- ಜಮ್ಮು ಮತ್ತು ಕಾಶ್ಮೀರ: 2
- ಉತ್ತರಾಖಂಡ: 3
- ಅರುಣಾಚಲ ಪ್ರದೇಶ: 2
- ಗೋವಾ: 1
- ತ್ರಿಪುರಾ: 1
- ಅಂಡಮಾನ್ ಮತ್ತು ನಿಕೋಬಾರ್: 1
- ದಮನ್ ಮತ್ತು ದಿಯು: 1
ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.!
- ಗಾಂಧಿನಗರದಿಂದ ಅಮಿತ್ ಶಾ
- ಗುನಾದಿಂದ ಜ್ಯೋತಿರಾದಿತ್ಯ ಸಿಂಧಿಯಾ
- ತಿರುವನಂತಪುರಂನ ರಾಜೀವ್ ಚಂದ್ರಶೇಖರ್
- ಸಿಂಗ್ಭುಮ್ನ ಗೀತಾ ಕೋಡಾ
- ದುರ್ಗ್ ನಿಂದ ವಿಜಯ್ ಬಘೇಲ್
- ರಾಯ್ಪುರದ ಬ್ರಿಜ್ಮೋಹನ್ ಅಗರ್ವಾಲ್
- ಚಾಂದನಿ ಚೌಕ್ ನ ಪ್ರವೀಣ್ ಖಂಡೇಲ್ವಾಲ್
- ನವದೆಹಲಿಯಿಂದ ಬಾನ್ಸುರಿ ಸ್ವರಾಜ್
- ನವಸಾರಿಯಿಂದ ಸಿ.ಆರ್.ಪಾಟೀಲ್
- ಉಧಂಪುರದ ಡಾ.ಜಿತೇಂದ್ರ ಸಿಂಗ್
- ಹಜಾರಿಬಾಗ್ ನ ಮನೀಶ್ ಜೈಸ್ವಾಲ್
- ಖುಂಟಿಯ ಅರ್ಜುನ್ ಮುಂಡಾ
- ವಿದಿಶಾದ ಶಿವರಾಜ್ ಸಿಂಗ್ ಚೌಹಾಣ್
- ಬಿಕಾನೇರ್ ನ ಅರ್ಜುನ್ ರಾಮ್ ಮೇಘವಾಲ್
- ಅಲ್ವಾರ್ ನಿಂದ ಭೂಪೇಂದ್ರ ಯಾದವ್
- ನಾಗೌರ್ ನಿಂದ ಸ್ಪರ್ಧಿಸಲಿರುವ ಜ್ಯೋತಿ ಮಿರ್ಧಾ
- ಜೋಧಪುರದ ಗಜೇಂದ್ರ ಸಿಂಗ್ ಶೇಖಾವತ್
- ಚಿತ್ತೋರ್ಗಢದಿಂದ ಸಿಪಿ ಜೋಶಿ
- ಝಾಲಾವರ್-ಬರಾನ್ ನ ದುಶ್ಯಂತ್ ಸಿಂಗ್ (ವಸುಂಧರಾ ರಾಜೇ ಅವರ ಮಗ)
- ಕೋಟಾದ ಓಂ ಬಿರ್ಲಾ
- ಮಲ್ಕಾಜ್ಗಿರಿಯ ಎಟೆಲಾ ರಾಜೇಂದರ್
- ದಿಬ್ರುಗಢದ ಸರ್ಬಾನಂದ ಸೋನೊವಾಲ್
- ತ್ರಿಪುರಾ ಪಶ್ಚಿಮದಿಂದ ಮಾಜಿ ಸಿಎಂ ಬಿಪ್ಲಬ್ ಕುಮಾರ್ ದೇಬ್ ಸ್ಪರ್ಧೆ
- ಮುಜಾಫರ್ ನಗರದ ಡಾ.ಸಂಜೀವ್ ಕುಮಾರ್ ಬಲಿಯಾನ್
- ಗೌತಮ್ ಬುದ್ಧ ನಗರದ (ನೋಯ್ಡಾ) ಡಾ.ಮಹೇಶ್ ಶರ್ಮಾ
- ಮಥುರಾದಿಂದ ಹೇಮಾ ಮಾಲಿನಿ
- ಖೇರಿಯ ಅಜಯ್ ಮಿಶ್ರಾ ತೆನಿ
- ಉನ್ನಾವೊದ ಸಾಕ್ಷಿ ಮಹಾರಾಜ್
- ಲಕ್ನೋದಿಂದ ರಾಜನಾಥ್ ಸಿಂಗ್
- ಅಮೇಥಿಯಿಂದ ಸ್ಮೃತಿ ಜುಬಿನ್ ಇರಾನಿ
- ಫತೇಪುರದಿಂದ ಸಾಧ್ವಿ ನಿರಂಜನ್ ಜ್ಯೋತಿ
- ದೊಮರಿಯಾಗಂಜ್ ನಿಂದ ಜಗದಾಂಬಿಕಾ ಪಾಲ್
- ಅಜಂಗಢದಿಂದ ದಿನೇಶ್ ಲಾಲ್ ಯಾದವ್ ನಿರಾಹುವಾ ಮತ್ತೆ
- ಗೋರಖ್ಪುರದಿಂದ ರವಿ ಕಿಶನ್
- ಬಾಲೂರ್ ಘಾಟ್ ನಿಂದ ಡಾ.ಸುಕಾಂತ ಮಜುಂದಾರ್
- ಹೂಗ್ಲಿಯಿಂದ ಲಾಕೆಟ್ ಚಟರ್ಜಿ
ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಘೋಷಿಸುವ ಮೊದಲು ಆಡಳಿತ ಪಕ್ಷವು ಗಣನೀಯ ಸಂಖ್ಯೆಯ ಅಭ್ಯರ್ಥಿಗಳನ್ನು ಘೋಷಿಸಲು ಬಯಸಿದೆ. ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಗುರುವಾರ ರಾತ್ರಿ ಸಭೆ ನಡೆಸಿತ್ತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಪಿಎಂ ಮೋದಿ ಸೇರಿದಂತೆ ಪಾರ್ಟಿ ಸದಸ್ಯರು ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಂತಿಮಗೊಳಿಸಲು ಸಮಾಲೋಚನೆ ನಡೆಸಿದ್ದರು. ಅದಾದ ಬಳಿಕ ಇಂದು ಪಟ್ಟಿ ಬಿಡುಗಡೆಯಾಗಿದೆ. ಇತ್ತೀಚಿನ ದಿನಗಳಲ್ಲಿ, ರಾಜ್ಯದಲ್ಲಿ ಅಭಿಪ್ರಾಯ ಸಮೀಕ್ಷೆಯ ನಂತರ ಹೆಸರುಗಳು ಕೇಂದ್ರಕ್ಕೆ ಬಂದಿವೆ, ಅದರ ಬಗ್ಗೆ ಚರ್ಚೆಯ ನಂತರ, ಕಳೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ 16 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಪೈಕಿ 195 ಸ್ಥಾನಗಳನ್ನು ಅಂತಿಮಗೊಳಿಸಲಾಗಿದೆ” ಎಂದು ವಿನೋದ್ ತಾವಡೆ ಹೇಳಿದರು.
ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 34 ಕೇಂದ್ರ ಸಚಿವರು ಮತ್ತು ರಾಜ್ಯ ಸಚಿವರು ಮತ್ತು ಲೋಕಸಭಾ ಸ್ಪೀಕರ್ ಸೇರಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಹೇಳಿದ್ದಾರೆ. ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ವಾರಣಾಸಿಯಿಂದ ಮೋದಿ ಸ್ಪರ್ಧೆ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 34 ಕೇಂದ್ರ ಸಚಿವರು ಮತ್ತು ರಾಜ್ಯ ಸಚಿವರು ಮತ್ತು ಲೋಕಸಭಾ ಸ್ಪೀಕರ್ ಸೇರಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಹೇಳಿದ್ದಾರೆ.
LIVE: Watch BJP Press Conference at party headquarters in New Delhi. https://t.co/nppQvosHrd
— BJP (@BJP4India) March 2, 2024