ಧಾರವಾಡ : ಧಾರವಾಡದ ಮಾಳಮಡ್ಡಿಯ ಪಾಳುಬಿದ್ದ ಮನೆಯಲ್ಲಿ ವ್ಯಕ್ತಿಯೊಬ್ಬರ ಅಸ್ಥಿಪಂಜರ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇದೀಗ ಮೃತ ವ್ಯಕ್ತಿಯ ತಾಯಿ ಹಾಗೂ ಸಹೋದರ ಪ್ರತ್ಯಕ್ಷರಾಗಿದ್ದು, ಮಗನ ಸಾವು ಸಹಜವಲ್ಲ, ಕೊಲೆ ಎಂದು ಆರೋಪಿಸಿದ್ದಾರೆ.
ಆಗಸ್ಟ್ 14 ರಂದು ಮಾಳಮಡ್ಡಿಯ ಪಾಳುಬಿದ್ದ ಮನೆಯಲ್ಲಿ ವ್ಯಕ್ತಿಯೊಬ್ಬರ ಅಸ್ಥಿಪಂಜರ ಪತ್ತೆಯಾಗಿತ್ತು. ಮೃತ ವ್ಯಕ್ತಿಯನ್ನು ಚಂದ್ರೇಶೇಖರ್ ಎಂದು ಗುರುತಿಸಲಾಗಿತ್ತು. ಆದರೆ ಸಂಬಂಧಿಕರು ಯಾರೂ ಇಲ್ಲದ ಕಾರಣದಿಂದ ಪ್ರಕರಣವನ್ನು ದಾಖಲಿಸಿರಲಿಲ್ಲ. ಇದೀಗ ಚಂದ್ರಶೇಖರ್ ತಾಯಿ ಹಾಗೂ ಸಹೋದರ ಪ್ರತ್ಯಕ್ಷರಾಗಿದ್ದು, ತಮ್ಮ ಮಗನ ಸಾವು ಸಹಜವಲ್ಲ. ಕೊಲೆ ಎಂದು ಆರೋಪಿಸಿ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಧಾರವಾಡದ ಮಾಳಮಡ್ಡಿಯ ಪಾಳುಬಿದ್ದ ಮನೆಯ ಕೋಣೆಯೊಂದರಲ್ಲಿ ಹಾಸಿಗೆ ಮೇಲೆ ಅಸ್ಥಿಪಂಜರ ಕಂಡಿದೆ. ಮನೆಯಲ್ಲಿ ಚಂದ್ರಶೇಖರ್ ಎಂಬುವರು ವಾಸವಿದ್ದರು. ಆಗಸ್ಟ್ 14 ರಂದು ಅವರ ಅಸ್ತಿಪಂಜರ ಪತ್ತೆಯಾಗಿತ್ತು.