ವಿಜಯನಗರ : ವಿಜಯನಗರದಲ್ಲಿ ತ್ರಿಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕೊಲೆಯ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಆರೋಪಿ ಅಕ್ಷಯ್ ತನ್ನ ತಂಗಿ ಮದುವೆಯಾಗದಿದ್ದರೂ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದು ಇಡೀ ಕುಟುಂಬವನ್ನೇ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಹೌದು, ತನ್ನ ತಂಗಿ ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು, ಇದಕ್ಕೆ ತಂದೆ-ತಾಯಿಯೂ ಬೆಂಬಲ ನೀಡಿದ್ದರು. ಅಮೃತ ಮದುವೆಯಾಗದೇ ಗರ್ಭಿಣಿಯಾಗಿದ್ದಳು, ಹೀಗಾಗಿ ತಂಗಿಯ ಗರ್ಭಪಾತಕ್ಕೆ ಅಕ್ಷಯ್ ಮುಂದಾಗಿದ್ದ, ಆದರೆ ತಂದೆ-ತಾಯಿ ಇದಕ್ಕೆ ಒಪ್ಪಿರಲ್ಲ. ಜೊತೆಗೆ ತಂಗಿ ಪ್ರೀತಿಸುತ್ತಿದ್ದ ಯುವಕನನ್ನು ಕರೆಸಿ ಎಚ್ಚರಿಕೆ ನೀಡಿದ್ದ. ಮರ್ಯಾದೆ ಹೊಯ್ತು ಎಂದು ತಂದೆ, ತಾಯಿ, ತಂಗಿಯನ್ನು ಕೊಲೆ ಮಾಡಿ ಮನೆಯಲ್ಲೇ ಶವಗಳನ್ನು ಹೂತು ಹಾಕಿದ್ದಾನೆ.
ಮೊದಲು ತಾಯಿಯನ್ನು ಪಾಪಿ ಪುತ್ರ ಅಕ್ಷಯ್ ಕೊಲೆ ಮಾಡಿದ್ದಾನೆ. ಚಾಕುವಿನಿಂದ ಇರಿದು ತಾಯಿ ಜಯಲಕ್ಷ್ಮಿಯನ್ನು ಪುತ್ರ ಅಕ್ಷಯ್ ಕೊಲೆ ಮಾಡಿದ್ದಾನೆ. ಬಳಿಕ ಮನೆಯ ಕೊಠಡಿಯಲ್ಲಿ ತಾಯಿಯ ಶವವನ್ನು ಹಾಕಿದ್ದಾನೆ . ನಂತರ ತಂಗಿಗೆ ಕರೆ ಮಾಡಿ ಮನೆಗೆ ಕರೆದು ಚಾಕು ಇರಿದು ಕೊಲೆ ಮಾಡಿದ್ದಾನೆ. ನಿನಗೆ ಗಿಫ್ಟ್ ತಂದಿದ್ದೇನೆ ಅಂತ ಕರೆದು ಕೊಲೆ ಮಾಡಿದ್ದಾನೆ. ತಂಗಿ ತಾಯಿಯ ಮೃತ ದೇಹಗಳನ್ನು ಕೊಠಡಿಯಲ್ಲಿ ಇಟ್ಟಿದ್ದಾನೆ.
ಆನಂತರ ಮನೆಗೆ ಬಂದು ತಂದೆ ಟಿವಿ ನೋಡುತ್ತಾ ಕುಳಿತಿದ್ದಾಗ ತಂದೆಯನ್ನು ಸಹ ಕೊಲೆ ಮಾಡಿದ್ದಾನೆ. ನಂತರ ಮನೆಯ ಹಾಲ್ ನಲ್ಲಿಯೇ ಮೂವರು ಮೃತದೇಹಗಳನ್ನು ಹೂತು ಹಾಕಿದ್ದಾನೆ. ಜನವರಿ 27ರಂದು ತಂದೆ ತಾಯಿ ಮತ್ತು ಸಹೋದರಿಯನ್ನು ಕೊಲೆ ಮಾಡಿದ್ದಾನೆ. ತಂದೆ ಭೀಮರಾಜ್ ತಾಯಿ ವಿಜಯಲಕ್ಷ್ಮಿ ಹಾಗೂ ಸಹೋದರಿಯ ಅಮೃತ ಳನ್ನು ಕೊಲೆ ಮಾಡಿದ್ದಾನೆ.








