ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾನವನ ದೇಹದ ಪೂರ್ತಿ ಅಸ್ಥಿ ಪಂಜರ ಪತ್ತೆಯಾಗಿದೆ ಎಂದು ವಿಶೇಷ ತನಿಖಾ ತಂಡ ಮಾಹಿತಿ ನೀಡಿದೆ.
ದೂರುದಾರ ತೋರಿಸಿದ ಜಾಗದಲ್ಲಿ 6ನೇ ಪಾಯಿಂಟ್ ನಲ್ಲಿ ತಲೆಬುರುಡೆ ಸೇರಿ ಪೂರ್ತಿ ಅಸ್ಥಿ ಪಂಜರ ಸಿಕ್ಕಿವೆ ಎಂದು ಮಾಹಿತಿ ತಿಳಿದು ಬಂದಿದೆ.ಸದ್ಯ 6ನೇ ಪಾಯಿಂಟ್ ನಲ್ಲಿ ಸಿಕ್ಕ ಸಂಪೂರ್ಣ ಅಸ್ತಿ ಪಂಜರವನ್ನು ANATOMICAL POSITTON’ ನಲ್ಲಿಟ್ಟು ಮಹಜರು ನಡೆಸಲಾಗುತ್ತದೆ. ಮನುಸ್ಯನ ದೇಹ ರಚನೆ ಇರೋ ರೀತಿಯಲ್ಲಿಟ್ಟು ಮಹಜರು ಮಾಡಲಾಗುತ್ತದೆ. ಮಂಗಳೂರು ಮೆಡಿಕಲ್ ಕಾಲೇಜಿಗೆ ಅಸ್ಥಿ ಪಂಜರ ರವಾನಿಸಲಾಗುತ್ತದೆ.
ನೇತ್ರಾವತಿ ನದಿ ತೀರದ 6ನೇ ಪಾಂಟ್ ನಲ್ಲಿ ನಿನ್ನೆ ಶೋಧಕಾರ್ಯಾಚರಣೆ ವೇಳೆ ಮೂಳೆಗಳು ಪತ್ತೆಯಾಗಿವೆ. ಇವು ಪುರುಷನ ದೇಹದ ತಲೆಬುರುಡೆ, ಕೈ-ಕಾಲಿನ ಮೂಳೆಗಳು ಎನ್ನಲಾಗಿವೆ. ಸದ್ಯ 6ನೇ ಪಾಯಿಮ್ಟ್ ನಲ್ಲಿ ಎಸ್ ಐಟಿ ತಂಡದಿಂದ ಶೋಧಕಾರ್ಯ ಮುಕ್ತಾಯಗೊಂಡಿದೆ.