ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ರೇಣುಕಾಸ್ವಾಮಿ ಕೊಲೆಗೂ ಮೊದಲು ಪವಿತ್ರಾಗೌಡಗೆ ಮಾಡಿದ್ದಾನೆ ಎನ್ನಲಾದ ಇನ್ ಸ್ಟಾಗ್ರಾಂ ಸ್ಕ್ರೀನ್ ಶಾಟ್ ನಕಲಿ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಗೂ ಮುನ್ನ ಹರಿದಾಡಿದ್ದ ಪವಿತ್ರಾಗೌಡಗೆ ಮಾಡಿದ್ದ ಇನ್ ಸ್ಟಾಗ್ರಾಂ ಮೆಸೇಜ್ ನಕಲಿಯಾಗಿದೆ. ಆದರೆ ರೇಣುಕಾಸ್ವಾಮಿ ಪವಿತ್ರಾಗೌಡಗೆ ಚಾಟ್ ಮಾಡಿದ್ದ. ಆದರೆ ಕೊಲೆಗೂ ಮುನ್ನ ಹರಿದಾಡಿದ್ದ ಅಶ್ಲೀಲ ಇನ್ ಸ್ಟಾಗ್ರಾಂ ಸ್ಕ್ರೀನ್ ಶಾಟ್ ನಕಲಿ ಎಂಬ ಮಾಹಿತಿ ಲಭ್ಯವಾಗಿದೆ.
ತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಇಂದು ಪೊಲೀಸರು ಬೆಂಗಳೂರಿನ 24 ನೇ ಎಸಿಎಂಎಂ ಕೋರ್ಟ್ ಗೆ 3,991 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದು, ತನಿಖಾಧಿಕಾರಿ ಎಸಿಪಿ ಚಂದನ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಬೆಂಗಳೂರಿನ 24 ನೇ ಎಸಿಎಂಎಂ ಕೋರ್ಟ್ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 3991 ಪುಟಗಳ ಸುದೀರ್ಘವಾದ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್ ನಲ್ಲಿ ನಟ ದರ್ಶನ್ ರೇಣುಕಾಸ್ವಾಮಿಯನ್ನು ಅಪಹರಣ ಮಾಡಿಸಿದ್ದು, ಹಲ್ಲೆ ಮಾಡಿದ್ದು, ಪಟ್ಟಣಗೆರೆ ಶೆಡ್ ನಲ್ಲಿ ನಟ ದರ್ಶನ್ ಇರೋದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ಜೊತೆಗೆ ಕೊಲೆಗೂ ಮುನ್ನ ಸ್ಟೋನಿ ಬ್ರೂಕ್ಸ್ ಪಬ್ ನಲ್ಲಿ ಸಭೆ ಮಾಡುವ ರೀತಿಯಲ್ಲಿ ಪಾರ್ಟಿ ಮಾಡಿದ್ದಾರೆ ಎಂದು ಉಲ್ಲೆಖಿಸಲಾಗಿದೆ.