ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾನವನ ದೇಹದ 12 ಭಾಗಗಳ ಜೊತೆಗೆ ಒಳ ಉಡುಪಿನ ತುಂಡು ಪತ್ತೆಯಾಗಿದೆ ಎಂದು ವಿಶೇಷ ತನಿಖಾ ತಂಡ ಮಾಹಿತಿ ನೀಡಿದೆ.
6ನೇ ಪಾಯಿಂಟ್ ನಲ್ಲಿ 12 ಮೂಳೆಗಳು ಪತ್ತೆಯಾಗಿವೆ, ಕೈ, ಕಾಲಿನ 2 ಮೂಳೆ ಸೇರಿದಂತೆ ಇತರೆ ಸಣ್ಣ ಮೂಳೆಗಳು ಪತ್ತೆಯಾಗಿವೆ, ಬುರಡೆಯ ಎರಡು ತುಂಡುಗಳು ಪತ್ತೆಯಾಗಿವೆ. ಮೂಳೆ, ಬುರುಡೆಯ ತುಂಡು ಸಂರಕ್ಷಿಸಿ ಎಫ್ ಎಸ್ ಎಲ್ ತಂಡ ಕೊಂಡೊಯ್ಯಲಿದೆ.
ಯಾವುದೇ ಸಾಕ್ಷ್ಯ ನಾಶವಾಗದಂತೆ ಎಸ್ ಐಟಿಯಿಂದ ಕಟ್ಟೆಚ್ಚರ, ಗುಂಡಿಯೊಳಗೆ ನೀರು ತುಂಬಿದರೆ ಸಾಕ್ಷ್ಯ ನಾಶವಾಗುವ ಆತಂಕದ ಹಿನ್ನೆಲೆಯಲ್ಲಿ 6ನೇ ಪಾಯಿಂಟ್ ಮೇಲ್ಭಾಗದಲ್ಲಿ ಶೀಟ್ ಅಳವಡಿಸಿ ಸಂರಕ್ಷಣೆ ಮಾಡಲಾಗುತ್ತಿದೆ.
ದೂರುದಾರ ತೋರಿಸಿದ್ದ 6ನೇ ಪಾಯಿಂಟ್ ನಲ್ಲಿ ಇದೀಗ ಸರ್ಕಾರಿ ಪಂಚರಿಂದ ಸ್ಥಳ ಮಹಜರ್ ಪ್ರಕ್ರಿಯೆ ಆರಂಭವಾಗಲಿದ್ದು, ಮಹಜರ್ ನಲ್ಲಿ ಪೊಲೀಸ್ ಅಧಿಕಾರಿ, ಎಫ್ ಎಸ್ ಎಲ್ ತಜ್ಞರು, ಸ್ಥಳೀಯರು ಕೂಡ ಹಾಜರಿದ್ದಾರೆ.
ಇಂದು ಅಧಿಕಾರಿಗಳು ದೂರುದಾರ ತೋರಿಸಿದ ಜಾಗದಲ್ಲಿ 6ನೇ ಪಾಯಿಂಟ್ ನಲ್ಲಿ ತಲೆಬುರುಡೆ ಸೇರಿ 12 ಮೂಳೆಗಳು ಸಿಕ್ಕಿವೆ ಎಂದು ಮಾಹಿತಿ ತಿಳಿದು ಬಂದಿದೆ. ನೇತ್ರಾವತಿ ನದಿ ತೀರದ 6ನೇ ಪಾಂಟ್ ನಲ್ಲಿ ಇಂದು ಶೋಧಕಾರ್ಯಾಚರಣೆ ವೇಳೆ 10 ಮೂಳೆಗಳು ಪತ್ತೆಯಾಗಿವೆ. ಇವು ಪುರುಷನ ದೇಹದ ತಲೆಬುರುಡೆ, ಕೈ-ಕಾಲಿನ ಮೂಳೆಗಳು ಎನ್ನಲಾಗಿವೆ. ಸದ್ಯ 6ನೇ ಪಾಯಿಮ್ಟ್ ನಲ್ಲಿ ಎಸ್ ಐಟಿ ತಂಡದಿಂದ ಶೋಧಕಾರ್ಯ ಮುಕ್ತಾಯಗೊಂಡಿದೆ.