ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊನೆಗೂ 10 ಮೂಳೆಗಳು ಸಿಕ್ಕಿದ್ದು, 6ನೇ ಪಾಯಿಂಟ್ ಸ್ಥಳವನ್ನು ಸಂರಕ್ಷಿತ ಜಾಗ ಎಂದು ಎಸ್ ಐಟು ಗುರುತು ಮಾಡಿದೆ.
ಇಂದು ಅಧಿಕಾರಿಗಳು ದೂರುದಾರ ತೋರಿಸಿದ ಜಾಗದಲ್ಲಿ 6ನೇ ಪಾಯಿಂಟ್ ನಲ್ಲಿ ತಲೆಬುರುಡೆ ಸೇರಿ 10 ಮೂಳೆಗಳು ಸಿಕ್ಕಿವೆ ಎಂದು ಮಾಹಿತಿ ತಿಳಿದು ಬಂದಿದೆ.
ನೇತ್ರಾವತಿ ನದಿ ತೀರದ 6ನೇ ಪಾಂಟ್ ನಲ್ಲಿ ಇಂದು ಶೋಧಕಾರ್ಯಾಚರಣೆ ವೇಳೆ 10 ಮೂಳೆಗಳು ಪತ್ತೆಯಾಗಿವೆ. ಇವು ಪುರುಷನ ದೇಹದ ತಲೆಬುರುಡೆ, ಕೈ-ಕಾಲಿನ ಮೂಳೆಗಳು ಎನ್ನಲಾಗಿವೆ. ಸದ್ಯ 6ನೇ ಪಾಯಿಮ್ಟ್ ನಲ್ಲಿ ಎಸ್ ಐಟಿ ತಂಡದಿಂದ ಶೋಧಕಾರ್ಯ ಮುಕ್ತಾಯಗೊಂಡಿದೆ.