ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನೀಡಿದ ತಿಂಡಿಯಲ್ಲಿ ಜಿರಳೆ ಪತ್ತೆ ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಗ್ರಾಹಕನ ವಿರುದ್ಧವೇ ದೂರು ದಾಖಲಾಗಿದೆ.
ಕೆಫೆಗೆ ತಿಂಡಿಗೆ ತಿನ್ನಲು ಬಂದಿದ್ದ ಗ್ರಾಹಕ ಬ್ಲ್ಯಾಕ್ ಮೇಲ್ ಮಾಡುವ ಉದ್ದೇಶ ಇಟ್ಟುಕೊಂಡೇ ಬಂದಿದ್ದ ಎನ್ನಲಾಗಿದೆ. ಆ ವ್ಯಕ್ತಿಯೇ ಪೊಂಗಲ್ ತಿಂಡಿಯಲ್ಲಿ ಹುಳು ಇಟ್ಟಿದ್ದಾರೆ ಎಂದು ಕೆಫೆ ಮಾಲೀಕರು ವಾದಿಸಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ರಾಮೇಶ್ವರಂ ಕೆಫೆಯಲ್ಲಿ ಗ್ರಾಹಕನೋರ್ವ ಪೊಂಗಲ್ ಖರೀದಿಸಿ, ಸೇವಿಸುತ್ತಿರುವಾಗ ಅದರಲ್ಲಿ ಜಿರಳೆ ಪತ್ತೆಯಾಗಿದೆ. ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು.
ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಮೇಶ್ವರಂ ಕೆಫೆ ಸ್ಪಷ್ಟನೆ ನೀಡಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಗ್ರಾಹಕರು ಆಹಾರ ಮಾಲಿನ್ಯದ ಬಗ್ಗೆ ಸುಳ್ಳು ಆರೋಪ ಹೊರಿಸುತ್ತಿದ್ದು, ಈ ಮೂಲಕ ಬ್ರ್ಯಾಂಡ್ಮೇಲ್ಗೆ ಹಾನಿ ಮಾಡಲು ಹೊರಟಿದ್ದಾರೆ. ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡಿದ್ದಾರೆ ಎಂದು ಆರೋಪಿಸಿ ಈ ಸಂಬಂಧ ಗ್ರಾಹಕನ ವಿರುದ್ಧ ದಾಖಲಾಗಿದೆ.