ನವದೆಹಲಿ : ಅಮೆರಿಕದಲ್ಲಿ ಭಾರತ ಭರ್ಜರಿ ಯಶಸ್ಸು ಕಂಡಿದ್ದು, 26/11ರ ಮುಂಬೈ ದಾಳಿಯ ಆರೋಪಿ ತಹವ್ವುರ್ ರಾಣಾನನ್ನ ಭಾರತಕ್ಕೆ ಕರೆತರಲು ದಾರಿ ಸುಗಮವಾಗಿದೆ. ರಾಣಾ ಹಸ್ತಾಂತರಕ್ಕೆ ಅಮೆರಿಕದ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.
ಆಗಸ್ಟ್ 2024 ರಲ್ಲಿ ತೀರ್ಪು ನೀಡುವಾಗ, ಯುಎಸ್ ನ್ಯಾಯಾಲಯವು ಭಾರತ-ಯುಎಸ್ ಹಸ್ತಾಂತರ ಒಪ್ಪಂದದ ಅಡಿಯಲ್ಲಿ ರಾಣಾನನ್ನ ಭಾರತಕ್ಕೆ ಕಳುಹಿಸಲು ಅನುಮೋದಿಸಿತ್ತು. ಇದೀಗ ಭಾರತ ಅವರನ್ನು ಶೀಘ್ರ ವಾಪಸ್ ಕರೆತರುವ ಪ್ರಕ್ರಿಯೆಯನ್ನ ಚುರುಕುಗೊಳಿಸುತ್ತಿದೆ. 26/11ರ ಮಾಸ್ಟರ್ ಮೈಂಡ್ ಡೇವಿಡ್ ಕೋಲ್ಮನ್ ಹೆಡ್ಲಿಗೆ ಸಹಾಯ ಮಾಡಿದ ಆರೋಪ ರಾಣಾ ಮೇಲಿದೆ. ಅಂದ್ಹಾಗೆ, ಹೆಡ್ಲಿ ಮುಂಬೈನ ಸ್ಥಳಗಳ ಪರಿಶೀಲನೆ ನಡೆಸಿದ್ದ.
ಇದಕ್ಕೂ ಮೊದಲು ಭಾರತವು ಅಮೆರಿಕದ ನ್ಯಾಯಾಲಯದ ಮುಂದೆ ಬಲವಾದ ಸಾಕ್ಷ್ಯವನ್ನ ಪ್ರಸ್ತುತಪಡಿಸಿತ್ತು, ಇದರಲ್ಲಿ ರಾಣಾ ಭಾಗಿಯಾಗಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಭಾರತದಲ್ಲಿ ರಾಣಾ ವಿರುದ್ಧದ ಆರೋಪಗಳು ಅಮೆರಿಕದ ನ್ಯಾಯಾಲಯಗಳಲ್ಲಿನ ಪ್ರಕರಣಗಳಿಗಿಂತ ಭಿನ್ನವಾಗಿವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಉಭಯ ದೇಶಗಳ ನಡುವಿನ ಒಪ್ಪಂದದ ಪ್ರಕಾರ, ಉಗ್ರನನ್ನ ಭಾರತಕ್ಕೆ ಹಸ್ತಾಂತರಿಸಬಹುದು.
ICC Test Ranking : ಇತಿಹಾಸ ಸೃಷ್ಟಿಸಿದ ‘ಜಸ್ಪ್ರೀತ್ ಬುಮ್ರಾ’ : ಟೆಸ್ಟ್ ಬೌಲರ್’ಗಳ ರ್ಯಾಂಕಿಂಗ್’ನಲ್ಲಿ ಅಗ್ರಸ್ಥಾನ