ಬೆಂಗಳೂರು : ಈ ತಿಂಗಳಾಂತ್ಯಕ್ಕೆ ಯುಗಾದಿ, ರಂಜಾನ್ ಹಬ್ಬಕ್ಕೆ ಊರಿಗೆ ಹೊರಟ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ಬಿಗ್ ಶಾಕ್ ನೀಡಿದ್ದು, ಖಾಸಗಿ ಬಸ್ ಟಿಕೆಟ್ ದರ ದುಪ್ಪಟ್ಟು ಹೆಚ್ಚಳ ಮಾಡಲಾಗಿದೆ.
ಹೌದು, ಮಾರ್ಚ್ 30ಕ್ಕೆ ಯುಗಾದಿ ಹಾಗೂ ಮಾರ್ಚ್ 31 ಕ್ಕೆ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಊರಿಗೆ ಹೊರಟ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ಶಾಕ್ ನೀಡಿದ್ದು, ಟಿಕೆಟ್ ದರವನ್ನು ದುಪ್ಪಟ್ಟು ಹೆಚ್ಚಳ ಮಾಡಿದೆ ಎನ್ನಲಾಗಿದೆ.
ಟಿಕೆಟ್ ದರ ಏರಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ, ಟಿಕೆಟ್ ದರ 50 ರಿಂದ 60 ರಷ್ಟು ಮಾತ್ರ ಟಿಕೆಟ್ ದರ ಏರಿಕೆ ಮಾಡಿದ್ದೇವೆ . ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಗಳಿಗೆ ಭಾರಿ ಹೊಡೆತ ಬಿದ್ದಿದೆ. ಹೀಗಾಗಿ ದರ ಏರಿಕೆ ಅನಿವಾರ್ಯ ಎಂದು ಹೇಳಿದ್ದಾರೆ.
ಇನ್ನು ಬೆಂಗಳೂರು-ಶಿವಮೊಗ್ಗ ಪ್ರಸ್ತುತ ದರ 500-990.ರೂ. ಇದ್ದದ್ದು 1199-1800 ರೂ.ಗೆ ಏರಿಕೆ ಆಗಿದೆ. ಬೆಂಗಳೂರು ಹಾಸನ 463 -1000 ರೂ ಇದ್ದದ್ದು 750-1600 ಆಗಿದೆ. ಬೆಂಗಳೂರು-ಮಂಗಳೂರು ಪ್ರಸ್ತುತ ದರ 650-1300ರೂ ಇದ್ದದ್ದು, 1200-4500 ರೂ. ಏರಿಕೆಯಾಗಿದೆ. ಬೆಂಗಳೂರು-ದಾವಣಗೆರೆ ಪ್ರಸ್ತುತ 450-1300 ರೂ ಇದ್ದದ್ದು, 750-5500 ಏರಿಕೆ ಮಾಡಲಾಗಿದೆ.