ನವದೆಹಲಿ : ಚಿನ್ನದಲ್ಲಿ ಹೂಡಿಕೆ ಮಾಡುವುದು ಉತ್ತಮ ಆಯ್ಕೆಯಾಗಿದೆ. ಯಾಕಂದ್ರೆ, ಇದು ನಿಮಗೆ ಅಪಾಯ-ಮುಕ್ತ ಆದಾಯವನ್ನ ನೀಡುತ್ತದೆ. ಚಿನ್ನದ ಮೇಲೆ ಹೂಡಿಕೆ ಮಾಡುವುದು ಪ್ರಯೋಜನಕಾರಿ. ಜನವರಿ30 ರಂದು ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ 910 ರೂಪಾಯಿ ಏರಿಕೆಯಾಗಿದೆ.
ಇಂದು 10 ಗ್ರಾಂ ಚಿನ್ನದದರ 910 ರೂ ಏರಿಕೆಯಾಗಿ 83,750 ರೂ ತಲುಪಿದೆ. ಇದು ಸಾರ್ವಕಾಲಿಕ ಗರಿಷ್ಟ ದರವಾಗಿದೆ. ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡಿದ್ದು, 1 ಕೆಜಿ ಬೆಳ್ಳಿ ದರ 1000 ರೂ ಏರಿಕೆಯೊಂದಿಗೆ 93,000 ರೂ ಗೆ ತಲುಪಿದೆ.
ಇಂಡಿಯಾ ಬುಲಿಯನ್ ಅಂಡ್ ಜ್ಯುವೆಲರ್ಸ್ ಪ್ರಕಾರ, ಜನವರಿ 29ರ ಸಂಜೆ 999 ಶುದ್ಧತೆಯ 24 ಕ್ಯಾರೆಟ್ ಚಿನ್ನದ ಬೆಲೆ 80313 ರೂಪಾಯಿ. ಜನವರಿ 29ರಂದು 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 80,800 ರೂಪಾಯಿಗೆ ಏರಿಕೆಯಾಗಿದೆ. ಜನವರಿ 28 ರಂದು ಸಂಜೆ 999 ಶುದ್ಧತೆಯ ಬೆಳ್ಳಿಯ ಬೆಲೆ 89750 ರೂ. ಜನವರಿ 29 ರಂದು 999 ಶುದ್ಧತೆಯ ಬೆಳ್ಳಿಯ ಬೆಲೆ 90428 ರೂ.ಗೆ ಏರಿಕೆಯಾಗಿತ್ತು. ಇದೀಗ 93,000 ರೂ.ಗೆ ತಲುಪಿದೆ.