ನವದೆಹಲಿ : ಚಿನ್ನದ ಬೆಲೆಯಲ್ಲಿ ಏರಿಕೆ ಮುಂದುವರೆದಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಚಿನ್ನದ ಬೆಲೆ 10 ಗ್ರಾಂಗೆ 2,430 ರೂ.ಗಳಷ್ಟು ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠ 88,500 ರೂ.ಗಳಿಗೆ ತಲುಪಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ತಿಳಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಎಲ್ಲಾ ಉಕ್ಕು ಮತ್ತು ಅಲ್ಯೂಮಿನಿಯಂ ಉತ್ಪನ್ನಗಳ ಮೇಲೆ ಶೇಕಡಾ 25ರಷ್ಟು ಹೊಸ ಸುಂಕವನ್ನು ಘೋಷಿಸಿದ್ದಾರೆ. ಇದರ ನಂತರ, ಜಾಗತಿಕವಾಗಿ ಸ್ಪಾಟ್ ಮಾರುಕಟ್ಟೆಗಳಲ್ಲಿ ಈ ಅಮೂಲ್ಯ ಲೋಹವು ಔನ್ಸ್’ಗೆ ದಾಖಲೆಯ $2,900 ಮಟ್ಟವನ್ನ ದಾಟಿತು. ಆಭರಣ ಮಾರಾಟಗಾರರು ಮತ್ತು ಚಿಲ್ಲರೆ ವ್ಯಾಪಾರಿಗಳು ಭಾರೀ ಪ್ರಮಾಣದಲ್ಲಿ ಖರೀದಿಸಿದ್ದರಿಂದ ಬೆಲೆಗಳು ಏರಿಕೆಯಾಗಿವೆ.
ಕಳೆದ ವಾರ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 86,070 ರೂ.ಗೆ ತಲುಪಿತ್ತು. ಸ್ಥಳೀಯ ಮಾರುಕಟ್ಟೆಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 2,430 ರೂ.ಗಳಷ್ಟು ಏರಿಕೆಯಾಗಿ 88,100 ರೂ.ಗಳಿಗೆ ತಲುಪಿ ದಾಖಲೆಯ ಗರಿಷ್ಠ ಮಟ್ಟವನ್ನ ತಲುಪಿದೆ. ಬೆಳ್ಳಿ ಬೆಲೆ ಕೆಜಿಗೆ 1,000 ರೂ. ಏರಿಕೆಯಾಗಿ 97,500 ರೂ.ಗೆ ತಲುಪಿದೆ.
ಹೆಚ್ಚುತ್ತಿರುವ ಜಾಗತಿಕ ಅನಿಶ್ಚಿತತೆಯ ನಡುವೆ ಹೂಡಿಕೆದಾರರು ಸುರಕ್ಷಿತ ಹೂಡಿಕೆಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ತಜ್ಞರು ಹೇಳುತ್ತಾರೆ. ಎಂಸಿಎಕ್ಸ್’ನಲ್ಲಿ ಏಪ್ರಿಲ್’ನಲ್ಲಿ ವಿತರಣೆಗಾಗಿ ಚಿನ್ನದ ಒಪ್ಪಂದಗಳು ಫ್ಯೂಚರ್ಸ್ ಟ್ರೇಡಿಂಗ್’ನಲ್ಲಿ 940 ರೂ.ಗಳಷ್ಟು ಏರಿಕೆಯಾಗಿ 10 ಗ್ರಾಂಗೆ 85,828 ರೂ.ಗಳ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನ ತಲುಪಿದೆ.
ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪು ಮಾಡುವ ರಹಸ್ಯ ಇಲ್ಲಿದೆ.! ಇದನ್ನು ಈ ರೀತಿ ಬಳಸಿ!
ನಮ್ಮ ಮೆಟ್ರೋ ದರ ಹೆಚ್ಚಳದ ವಿರುದ್ಧ ಸಿಡಿದೆದ್ದ ಬಿಜೆಪಿ: ಬೆಂಗಳೂರಿನ ಹಲವು ನಿಲ್ದಾಣಗಳ ಎದುರು ಪ್ರತಿಭಟನೆ
ಭಾರತ-ಬಾಂಗ್ಲಾ ಮುನಿಸಿಗೆ ಕೊನೆ.! ಜೈಶಂಕರ್ ಜೊತೆ ಮಾತುಕತೆಗೆ ಯೋಜನೆ ರೂಪಿಸಿದ ಯೂನಸ್ ಸರ್ಕಾರ