ನವದೆಹಲಿ : ಆಭರಣ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ದೆಹಲಿಯಲ್ಲಿ ಶುದ್ಧ ಚಿನ್ನದ ಬೆಲೆ 10 ಗ್ರಾಂ 700 ರೂಪಾಯಿ ಏರಿಕೆಗೊಂಡು 99,370 ರೂಪಾಯಿಗಳಲ್ಲಿ ವಹಿವಾಟು ನಡೆಸಿದೆ.
ಜಾಗತಿಕ ವ್ಯಾಪಾರ ಒತಡಗಳು ಹೆಚ್ಚುತ್ತಿರುವುದರಿಂದ ಹೂಡಿಕೆದಾರರು ಬಂಗಾರವನ್ನು ಸುರಕ್ಷಿತ ಹೂಡಿಕೆಯಾಗಿ ಪರಿಗಣಿಸುತ್ತಿರುವುದರಿಂದ ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 700 ರೂ.ನಷ್ಟು ಏರಿಕೆಯಾಗಿದೆ.
ಬೆಳ್ಳಿಯ ಬೆಲೆ ಶುಕ್ರವಾರ 1,500 ರೂ. ಏರಿಕೆಯಾಗಿ ಕೆಜಿಗೆ 1,05,500 ರೂ.ಗೆ ತಲುಪಿದೆ. ಇದು ಗುರುವಾರ 1,04,000 ರೂ. ಇತ್ತು ಎಂದು ಅಖಿಲ ಭಾರತ ಸರಾಫ ಸಂಘ ಮಾಹಿತಿ ನೀಡಿದೆ.