ಬೆಂಗಳೂರು : ಆಭರಣ ಪ್ರಿಯರಿಗೆ ಬಿಗ್ ಶಾಕ್, ದೇಶಾದ್ಯಂತ ಇಂದು ಮತ್ತೆ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಶುದ್ಧ ಚಿನ್ನದ ದರ 10 ಗ್ರಾಂಗೆ 700 ರೂ. ಏರಿಕೆಯಾಗಿ 79 700 ರೂ.ಗೆ ತಲುಪಿದೆ.
ಚಿನ್ನಾಭರಣ ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳ ತಾಜಾ ಖರೀದಿಯಿಂದಾಗಿ ದೆಹಲಿಯಲ್ಲಿ ಚಿನ್ನದ ದರ 10 ಗ್ರಾಂ ಗೆ 700 ರೂ. ಏರಿಕೆಯಾಗಿದ್ದು, 79,300 ರೂ.ಗೆ ಮಾರಾಟವಾಗಿದೆ. ಬೆಳ್ಳಿ ದರ ಕೆಜಿಗೆ 1300 ರೂ.ಏರಿಕೆಯಾಗಿದ್ದು, 92,000 ರೂ.ಗೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂಗೆ 7215 ರೂ. ಇದ್ದು 10 ಗ್ರಾಂ ಗೆ 72,150 ರೂ. ಆಗಿದೆ. 24 ಕ್ಯಾರೆಟ್ ನ ಚಿನ್ನದ ದರ 10 ಗ್ರಾಂ ಗೆ 78210 ರೂ. ಇದೆ. ಈ ಮೂಲಕ ದಿನದಿಂದ ದಿನಕ್ಕೆ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರೀ ಬೆಲೆ ಏರಿಕೆಯಾಗುತ್ತಿದ್ದು, ಆಭರಣ ಪ್ರಿಯರಿಗೆ ಶಾಕ್ ಎದುರಾಗಿದೆ.