ಮೈಸೂರು : ರಾಜ್ಯದಲ್ಲಿ ಐದು ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದ್ದು, ಈಗಾಗಲೇ ಹಲವು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಸಾಮಾಜಿಕವಾಗಿ ಮಾದರಿಯಾಗಿದ್ದಾರೆ. ಆದರೆ ಇದೀಗ ಮೂರು ತಿಂಗಳಿಗೊಮ್ಮೆ ಗ್ರಹಲಕ್ಷ್ಮಿ ಹಣ ಹಾಕುತ್ತೇವೆ ಪ್ರತಿ ತಿಂಗಳು ಹಾಕೋಕೆ ಕೆಲವು ತೊಡಕುಗಳಿವೆ ಎಂದು ಗ್ಯಾರಂಟಿ ಸಮಿತಿ ಅಧ್ಯಕ್ಷ ಹೆಚ್ಎಂ ರೇವಣ್ಣ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ತಿಂಗಳಿಗೊಮ್ಮೆ ಗೃಹಲಕ್ಷ್ಮಿ ಹಣ ಕೊಡುತ್ತಿದ್ದೇವೆ. ಜಿಎಸ್ಟಿ ವಿಚಾರದಲ್ಲಿ 1 ಲಕ್ಷ 20 ಸಾವಿರ ಜನರಿಗೆ ಹಣ ಹೋಗಿರಲಿಲ್ಲ. ಅದರಲ್ಲಿ ಈಗ 58 ಸಾವಿರ ಜನರ ಸಮಸ್ಯೆಯನ್ನ ಬಗೆಹರಿಸಿದ್ದೇವೆ. ಉಳಿದ ಜನರ ಸಮಸ್ಯೆ ಬಗೆ ಹರಿಸುತ್ತೇವೆ.ನಾವು ಅಧಿಕಾರಕ್ಕೆ ಬಂದಾಗಿನಿಂದ ಗೃಹಲಕ್ಷ್ಮಿ ಹಣ ನಿಲ್ಲಿಸಿಲ್ಲ. ಪ್ರತಿ ತಿಂಗಳು ಹಣ ಕೊಡೋದಕ್ಕೆ ಕೆಲವು ತೊಡಕುಗಳಿವೆ ಎಂದರು.
ಹೀಗಾಗಿ ಪ್ರತಿ ತಿಂಗಳು ಹಣ ಕೊಡಲು ಆಗುತ್ತಿಲ್ಲ ಎನ್ನುವ ಮೂಲಕ ಪ್ರತಿ ತಿಂಗಳ ಗೃಹಲಕ್ಷ್ಮಿ ಹಣ ಕೊಡಲು ಆಗಲ್ಲ ಎಂದು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ರಾಜ್ಯದ ಯಜಮಾನರು ಘರಲಕ್ಷ್ಮಿ ಹಣ ಖಾತೆಗೆ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದಾರೆ ಇದರ ಬೆನ್ನಲ್ಲೇ ಹೆಚ್ಎಂ ರೇವಣ್ಣ ಈ ಒಂದು ಹೇಳಿಕೆ ನೀಡಿದ್ದು, ಧರಲಕ್ಷ್ಮಿ ಫಲಾನುಭವಿಗಳು ಅಸಮಾಧಾನ ಹೊರ ಹಾಕಿದ್ದಾರೆ.