ಬೆಂಗಳೂರು : ಹೋಟೆಲ್ ಗ್ರಾಹಕರಿಗೆ ಶಾಕ್ ಎದುರಾಗಲಿದ್ದು, ಕಾಫಿ ದರ 5 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಭಾರತೀಯ ಕಾಫಿ ವ್ಯಾಪಾರಿ ಸಂಘ (ಐಸಿಟಿಎ) ಕೇಜಿ ಕಾಫಿ ಪುಡಿ ಬೆಲೆ ಹೆಚ್ಚಳ ಮಾಡಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ಕಾಫಿ ಪುಡಿಯ ಬೆಲೆಗಳು, ಸಿಲಿಂಡರ್ ದರ, ಹಾಲಿನ ದರ ಹೆಚ್ಚಳದ ಪರಿಣಾಮ ಕಾಫಿ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದ್ದು, ಕಾಫಿ 5 ರೂ. (ಸಾಮಾನ್ಯ ಹೊಟೆಲ್) ಹೆಚ್ಚಳ ಮಾಡಲು ನಿರ್ಧರಿಸಲಾಗಿದ್ದು, ಶೀಘ್ರವೇ ನೂತನ ದರ ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ರೋಸ್ಟರ್ ಗಳು ಮಾರಾಟ ಮಾಡುವ ಹುರಿದ ಕಾಫಿ ಪುಡಿಯ ಬೆಲೆ ಫೆಬ್ರವರಿ ಅಂತ್ಯದ ವೇಳೆಗೆ ಕೆಜಿಗೆ 100 ರೂಗಳಷ್ಟು ಹೆಚ್ಚಾಗಲಿದೆ ಈ ಹಿನ್ನೆಲೆಯಲ್ಲಿ ಕಾಫಿ ಬೆಲೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.