ಹೈದ್ರಾಬಾದ್ : ನಗರದ ಮಾಧಾಪುರ ಪ್ರದೇಶದ ಫುಲ್ ಟ್ಯಾಂಕ್ ಲೆವೆಲ್ (FTL) ಪ್ರದೇಶದಲ್ಲಿ ಅಕ್ರಮವಾಗಿ ಅತಿಕ್ರಮಣ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತೆಲುಗು ನಟ ನಾಗಾರ್ಜುನ ಅಕ್ಕಿನೇನಿ ಒಡೆತನದ ಕನ್ವೆನ್ಷನ್ ಹಾಲ್ ನೆಲಸಮಗೊಳಿಸಲು ಹೈದರಾಬಾದ್ ವಿಪತ್ತು ಪರಿಹಾರ ಮತ್ತು ಆಸ್ತಿ ಸಂರಕ್ಷಣಾ ಸಂಸ್ಥೆ (HYDRAA) ಶನಿವಾರ ಪ್ರಾರಂಭಿಸಿದೆ. ಸಧ್ಯ ನೆಲಸಮ ನಿಲ್ಲಿಸುವಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಅದ್ರಂತೆ, ಸಧ್ಯ ನೆಲಸಮ ಕಾರ್ಯಾಚರಣೆಯನ್ನ ಸ್ಥಗಿತಗೊಳಿಸಲಾಗಿದೆ.
ನಟನಿಗೆ ಸೇರಿದ ಮಾದಾಪುರದಲ್ಲಿರುವ ಎನ್ ಕನ್ವೆನ್ಷನ್ ಸೆಂಟರ್’ನ್ನ ಇಂದು ಹೈದರಾಬಾದ್ ವಿಪತ್ತು ಪರಿಹಾರ ಅಧಿಕಾರಿಗಳು ಕೆಡವಿದ್ದಾರೆ. ಇನ್ನು ನಟ ನಾಗಾರ್ಜುನ, “ಕನ್ವೆನ್ಷನ್ ಹಾಲ್ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೂ ಯಾವುದೇ ನೋಟಿಸ್ ನೀಡದೆ ತಮಗೆ ಸಂಬಂಧಿಸಿದ ಕಟ್ಟಡವನ್ನ ಕೆಡವಲಾಗಿದೆ” ಎಂದು ನಾಗಾರ್ಜುನ ಆರೋಪಿಸಿದ್ದಾರೆ. ಇಂದು ಕೆಡವಿದ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯದಲ್ಲಿ ಗೃಹ ಮನವಿ ಅರ್ಜಿ ಸಲ್ಲಿಸಲಾಗಿತ್ತು. ಎನ್-ಕನ್ವೆನ್ಷನ್’ಗೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದು, ಯಾವುದೇ ನೋಟಿಸ್ ನೀಡದೆ ಕೆಡವಲಾಗಿದೆ ಎಂದು ಅರ್ಜಿ ಸಲ್ಲಿಸಲಾಗಿತ್ತು.
ಬ್ರಿಟಿಷ್ ಹೈಕಮಿಷನರ್ ಆಗಲು ಭಾರತೀಯ ಯುವತಿಯರಿಂದ ಅರ್ಜಿ ಆಹ್ವಾನಿಸಿದ ಯುಕೆ : ವಿವರ ಇಲ್ಲಿದೆ