ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಗೆ ಬಿಗ್ ರಿಲೀಫ್ ಸಿಕ್ಕಿದ್ದು, ನಟ ದರ್ಶನ್ ಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿಯ ಜೈಲಿನಲ್ಲಿರು ನಟ ದರ್ಶನ್ ಅವರು ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದಂತ ಹೈಕೋರ್ಟ್, ಕಾಯ್ದಿರಿಸಿದ್ದಂತ ತೀರ್ಪು ಪ್ರಕಟಿಸಿದ್ದು, ಇಂದು ದರ್ಶನ್ ಗೆ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ.
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದರು. ಅವರು ತಮ್ಮ ವಕೀಲರ ಮೂಲಕ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ನಡೆಸಿತು. ನಟ ದರ್ಶನ್ ಪರವಾಗಿ ಹಿರಿಯ ವಕೀಲ ಸಿ.ವಿ ನಾಗೇಶ್ ಅವರು ವಾದಿಸಿದರು.
ಅರ್ಜಿ ವಿಚಾರಣೆಯ ವೇಳೆ ಬೆಂಗಳೂರಲ್ಲಿ ಈ ವ್ಯವಸ್ಥೆ ಇರುವ ಆಸ್ಪತ್ರೆಗಳು ಯಾವುವು ಇದೆ ಎಂದು ನ್ಯಾಯಾಧೀಶರಾದ ವಿಶ್ವಜಿತ್ ಶೆಟ್ಟಿ ಪ್ರಶ್ನಿಸಿದ್ದು, ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರು ಬೆಂಗಳೂರಿನಲ್ಲಿ ವಿಕ್ಟೋರಿಯಾ, ಬೌರಿಂಗ್ ಆಸ್ಪತ್ರೆಯಲ್ಲಿ ಈ ಒಂದು ಚಿಕೆತ್ಸೆಯ ವ್ಯವಸ್ಥೆ ಇದೆ ಎಂದು ಜಡ್ಜ್ ಗೆ ಮನವರಿಕೆ ಮಾಡಿದರು. ಸುಪ್ರೀಂ ಕೋರ್ಟ್ ನ ಮತ್ತೊಂದು ತೀರ್ಪು ಉಲ್ಲೇಖಿಸಿ ಸಿವಿ ನಾಗೇಶ್ ವಾದ ಮಂಡಿಸಿದ ಸಿವಿ ನಾಗೇಶ್, ರೋಗಿಯ ಪರಿಸ್ಥಿತಿ ಅನುಮಾನಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅನಾರೋಗ್ಯದ ಕಾರಣಕ್ಕೆ ಸುಪ್ರೀಂಕೋರ್ಟ್ ವ್ಯಕ್ತಿಗೆ ಜಾಮೀನು ನೀಡಿದೆ ಹೀಗಾಗಿ ಮಧ್ಯಂತರ ಜಾಮೀನು ನೀಡುವಂತೆ ಮನವಿ ಮಾಡಿದರು.
ಈ ವೇಳೆ ಜಡ್ಜ್ ವಿಶ್ವಜೀತ್ ಶೆಟ್ಟಿ ಅವರು ನೀವು ಹೇಳುತ್ತಿರುವ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಪ್ರಕರಣದಲ್ಲಿ ಮೂರು ವರ್ಷ ಆ ವ್ಯಕ್ತಿ ಜೈಲಿನಲ್ಲಿ ಇದ್ದ ಎಂದು ಹೇಳಿದಾಗ, ವೈದ್ಯಕೀಯ ಕಾರಣಕ್ಕೆ ಜಾಮೀನು ನೀಡಿರುವ ಅನೇಕ ಪ್ರಕರಣಗಳಿವೆ.ಈ ಪ್ರಕರಣವು ಜಾಮೀನು ನೀಡಲು ಅರ್ಹ ಪ್ರಕರಣವಾಗಿದೆ. ಹಾಗಾಗಿ ಮಧ್ಯಂತರ ಜಾಮೀನು ನೀಡುವಂತೆ ಸಿ ವಿ ನಾಗೇಶ್ ಮನವಿ ಮಾಡಿದರು.
ಡಿಕೆ ಶಿವಕುಮಾರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಸಿ ಜಾಮೀನು ಉಲ್ಲೇಖಿ ಸಿಸಿ ನಾಗೇಶ್ ವಾದ ಮಂಡಿಸಿದ್ದು, ಡಿಕೆ ಶಿವಕುಮಾರ್ ಅವರಿಗಿದ್ದ ಸಮಸ್ಯೆ ಗಿಂತ ಹೆಚ್ಚಿನ ಅನಾರೋಗ್ಯ ದರ್ಶನ್ ಅವರಿಗೆ ಇದೆ. 2022 23ರಲ್ಲಿಯೂ ಈ ಬಗ್ಗೆ ಚಿಕಿತ್ಸೆ ಪಡೆಯಲಾಗಿದೆ. ಬೆನ್ನು ಹುರಿಯ ಸಮಸ್ಯೆಯಿಂದ ಈಗಾಗಲೇ ಕಾಲು ಮರಗಟ್ಟುವಿಕೆ ಆಗುತ್ತಿದೆ. ಹೀಗೆ ಮುಂದುವರೆದರೆ ಇನ್ನಷ್ಟು ಸಮಸ್ಯೆ ಆಗಬಹುದು. ಡಿಸ್ಕ್ ನಲ್ಲಿನ ಸಮಸ್ಯೆಯಿಂದ ನರದಿಂದ ರಕ್ತ ಪರಿಚಲನೆ ಆಗುತ್ತಿಲ್ಲ. ಹೀಗಾಗಿ ಶಸ್ತ್ರಚಿಕಿತ್ಸೆ ಅಗತ್ಯವಿದೆ ಪಾರಂಪರಿಕ ಚಿಕಿತ್ಸೆಯಿಂದ ಇದು ಪರಿಹಾರ ಆಗುವುದಿಲ್ಲ. ಶಸ್ತ್ರಚಿಕಿತ್ಸೆಯಿಂದ ಮಾತ್ರವೇ ಈ ಸಮಸ್ಯೆ ಗುಣಪಡಿಸಬಹುದಾಗಿದೆ ಎಂದು ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದರು.4
ಬಳಿಕ ಎಸ್ ಪಿ ಪಿ ಪ್ರಸನ್ನ ಕುಮಾರ್ ವಾತ ಮಂಡಿಸಿದ್ದು, ವೈದ್ಯರ ವರದಿಯನ್ನು ಓದುತ್ತಿದ್ದಾರೆ. ವೈದ್ಯರ ವರದಿಯಲ್ಲಿ ಮುಂದೊಮ್ಮೆ ಆಗಬಹುದು ಅಂತ ಇದೆ. ಮುಂದೊಮ್ಮೆ ಆದರೆ ಸರಿಪಡಿಸಬಹುದೇ ಎಂದು ಇದೇ ವೇಳೆ ಜಡ್ಜ್ ಪ್ರಸನ್ನ ಕುಮಾರ್ ಅವರಿಗೆ ಪ್ರಶ್ನಿಸಿದರು. ವಿಚಾರಣಾ ಧೀನ ಕೈಗೂ ಉತ್ತಮ ಆರೋಗ್ಯದ ಹಕ್ಕಿದೆ ಮುಂದೆ ಸಮಸ್ಯೆ ಆದರೆ ಅದನ್ನು ಸರಿಪಡಿಸಲಾಗುವುದಿಲ್ಲ ಈ ಹಿಂದೆ ಹಿಪ್ ಜಾಯಿಂಟ್ ಸಮಸ್ಯೆ ಸರಿಪಡಿಸಲಾಗಿದೆ ಎಂದು ಎಸ್ ಪಿ ಪಿ ತಿಳಿಸಿದಾಗ ನೀವು ವೈದ್ಯಕೀಯ ವರದಿಯನ್ನು ಪ್ರಶ್ನಿಸುತ್ತಿದ್ದೀರಾ ಎಂದು ಪ್ರಶ್ನಿಸಿದರು.
ಜೈಲಿಗೆ ಸೇರಿದ ಮೇಲೆ ಎಂ ಆರ್ ಐ ವರದಿಯಲ್ಲಿ ಇದೆಯಲ್ಲ.ಈಗಿನ ವರದಿಯನ್ನು ಪರಿಗಣಿಸಬೇಕಲ್ಲವೇ? ಹಾಗಿದ್ದರೆ ಮೆಡಿಕಲ್ ಬೋರ್ಡ್ ಮೂಲಕ ಅಭಿಪ್ರಾಯ ಪಡೆಯುವುದು ಸೂಕ್ತ ಎಂದು ಪ್ರಕರಣ ಒಂದನ್ನು ಉಲ್ಲೇಖಿಸಿ ಎಸ್ ಪಿ ಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದರು.
ವರದಿಯಲ್ಲಿ ಯಾವ ಆಪರೇಷನ್ ಎಷ್ಟು ದಿನ ಅಂತ ವಿವರ ಇಲ್ಲ ಹೀಗಾಗಿ ಮೆಡಿಕಲ್ ಬೋರ್ಡ್ ಅಗತ್ಯವೆನ್ನುತ್ತಿದ್ದಾರೆ ಎಂದು ಜಡ್ಜ್ ಕೇಳಿದಾಗ ಚಿಕಿತ್ಸೆ ಪಡೆಯುವುದು ವ್ಯಕ್ತಿಯ ಮೂಲಭೂತ ಹಕ್ಕು. ಆಸ್ಪತ್ರೆಗೆ ದಾಖಲಿಸಿದ ಬಳಿಕವೇ ಇದು ತಿಳಿಯುತ್ತದೆ. ವೈದ್ಯರು ಎಷ್ಟು ದಿನಗಳು ಅಂತ ಹೇಳಬಹುದು ಎಂದು ಜಡ್ಜ್ ಕೇಳಿದಾಗ ನಾವು ಕೇಳುತ್ತಿರುವುದು ಮದ್ಯಂತರ ಜಾಮೀನು ಅಷ್ಟೇ. ಬಳ್ಳಾರಿಯ ವೈದ್ಯರು ಈಗಾಗಲೇ ವರದಿ ನೀಡಿದ್ದಾರೆ ಇದನ್ನು ಅನುಮಾನಿಸಲು ಯಾವುದೇ ಕಾರಣವಿಲ್ಲ ಎಂದು ಸಿವಿ ನಾಗೇಶ್ ವಾದಿಸಿದರು.
ನೀವು ಎಲ್ಲಿ ಚಿಕಿತ್ಸೆ ಪಡೆಯಲು ಬಯಸುತ್ತೀರಿ ಎಂದು ಜಡ್ಜ್ ಕೇಳಿದಾಗ ಇದೇ ವೇಳೆ ಕೇಳಿದಾಗ ದರ್ಶನ್ ಮೈಸೂರಿನ ನಿವಾಸಿ ಹೀಗಾಗಿ ಅಲ್ಲಿಯೇ ಈ ಹಿಂದೆ ಚಿಕಿತ್ಸೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಸಾಕ್ಷಿಗಳಿರುವುದರಿಂದ ಇಲ್ಲಿ ಇರುವುದಿಲ್ಲ. ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತೇವೆ ಕಾಲಕಾಲಕ್ಕೆ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡುತ್ತೇವೆ. ಹೀಗಾಗಿ ನಮಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ಸಿವಿ. ನಾಗೇಶ್ ಮನವಿ ಮಾಡಿದರು. ಮೈಸೂರಿನ ಅಪೋಲೋ ಆಸ್ಪತ್ರೆಯಿಂದಲೇ ವರದಿ ಪಡೆಯಬಹುದಲ್ಲವೇ ಎಂದು ಜಡ್ಜ್ ಕೇಳಿದಾಗ, ತಪಾಸಣೆ ಬೇರೆ ಸರ್ಕಾರ ಆಸ್ಪತ್ರೆಯಲ್ಲಿ ಮಾಡಿಸಿ ವರದಿ ಪಡೆಯಬೇಕು ಎಂದು ಎಸ್ ಪಿ ಪಿ ಪ್ರಸನ್ನ ಕುಮಾರ್ ಹೇಳಿದರು ಇದಕ್ಕೆ ಜಡ್ಜ್ ನೀವು ಈ ಹಿಂದೆ ನಿಮ್ಮದೇ ಆಸ್ಪತ್ರೆಯಲ್ಲಿ ವರದಿ ಪಡೆದಿದ್ದಿರಲ್ಲ? ಆಸ್ಪತ್ರೆಯ ವೈದ್ಯರು ತಪಾಸಣೆ ನಡೆಸಿ ಹೇಳಬಹುದು ಅಲ್ವಾ? ಎಂದು ಜಡ್ಜ್ ಪ್ರಶ್ನಿಸಿದರು.
ಮೆಡಿಕಲ್ ಬೋರ್ಡ್ ಅಭಿಪ್ರಾಯ ಪಡೆದಿರುವ ಹಲವು ತೀರ್ಪುಗಳಿವೆ ಎಂದು ಪ್ರಸನ್ನ ಕುಮಾರ್ ತಿಳಿಸಿದಾಗ, ಹಿರಿಯ ವಕೀಲರೇ ಎರಡನೇ ಅಭಿಪ್ರಾಯವನ್ನು ಬೆಂಗಳೂರಿನಲ್ಲಿ ಪಡೆಯಬಹುದಲ್ಲವೇ? ಎಂದು ಜಡ್ಜ್ ಕೇಳಿದಾಗ ಚಿಕಿತ್ಸೆ ಪಡೆಯುವ ವೈದ್ಯರಿಂದಲೇ ಅಭಿಪ್ರಾಯ ಪಡೆಯಬೇಕು ಎಂದಾಗ, ಎರಡನೇ ಅಭಿಪ್ರಾಯ ಏಕೆ ಬೇಕು ಎಂದು ಸಬಿ ನಾಗೇಶ್ ಪ್ರಶ್ನೆಸಿದರು. ನೂರಾಲೋಜಿಸ್ಟ್ ಆಪರೇಷನ್ ಬೇಕು ಅಂತ ಕೇಳಿದ್ದಾರೆ ಆದರೆ ಯಾವಾಗ ಬೇಕು ಎಷ್ಟು ದಿನ ಬೇಕೆಂದು ಹೇಳಿಲ್ಲ ಎಂದು ಜಡ್ಜ್ ತಿಳಿಸಿದರು.
ಚಿವುಟಿದವರಿಗೆ ನೋವು ಗೊತ್ತಾಗುವುದಿಲ್ಲ. ಚಿವುಟಿಸಿಕೊಂಡವರಿಗೆ ಮಾತ್ರ ಅನುಭವ ಗೊತ್ತಾಗುತ್ತದೆ. ದರ್ಶನ್ ಗೆ ಓಡಾಡಲು ಆಗುತ್ತಿಲ್ಲ ಕೂರಲು ಆಗುತ್ತಿಲ್ಲ ಎಂದು ನಾಗೇಶ್ ವಾದಿಸಿದರು. ವೈದ್ಯರ ವರದಿಯನ್ನು ಅನುಮಾನಿಸಲು ಕಾರಣಗಳೇ ಇಲ್ಲ.ಎಷ್ಟು ಸಲ ಟೆಸ್ಟ್, ಎಷ್ಟು ಸಲ ವರದಿ ಪಡೆಯಬೇಕು. ಈ ಹಿಂದೆ ಹಿಪ್ ಜಾಯಿಂಟ್ ಬಗ್ಗೆ ವರದಿ ಪಡೆಯಲಾಗಿತ್ತು. ಈಗ ಒಂದೇ ಬಾರಿ ಎಂ ಆರ್ ಐ ಸ್ಕ್ಯಾನಿಂಗ್ ಮಾಡಿಸಲಾಗಿದೆ ಎಂದು ಪ್ರಸನ್ನ ಕುಮಾರ್ ತಿಳಿಸಿದರು.
ಕೆಲ ದಿನಗಳ ಕಾಲ ಚಿಕಿತ್ಸೆ ಪಡೆಯಲು ಆಕ್ಷೇಪಣೆ ಸರಿಯಲ್ಲ. ಮೆಡಿಕಲ್ ಎಮರ್ಜೆನ್ಸಿ ಇರುವುದರಿಂದ ಮಧ್ಯಂತರ ಜಾಮೀನು ನೀಡಬೇಕು. ಮೆಡಿಕಲ್ ಬೋರ್ಡ್ ಅಭಿಪ್ರಾಯವಿಲ್ಲದೆ ಮಧ್ಯಂತರ ಜಾಮೀನು ನೀಡಲಾಗಿದೆ. ಕರ್ನಾಟಕ ಹೈ ಕೋರ್ಟ್ ಆದೇಶಗಳಿವೆ ದೆಹಲಿಯ ಉದಾಹರಣೆಯ ಅಗತ್ಯವಿಲ್ಲ ಎಂದು ಎಸ್ ಪಿ ಪಿ ಪ್ರಸನ್ನ ಕುಮಾರ್ ವಾದಿಸಿದರು.