ಹೈದರಾಬಾದ್ : ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿದ್ದಕ್ಕಾಗಿ ಮಿಯಾಪುರ ಪೊಲೀಸರು ವಿಜಯ್ ದೇವರಕೊಂಡ ಸೇರಿದಂತೆ 25 ಕ್ಕೂ ಹೆಚ್ಚು ತೆಲುಗು ನಟ-ನಟಿಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬೆಟ್ಟಿಂಗ್ ಆ್ಯಪ್ ಗಳನ್ನು ಪ್ರಚಾರ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಹೈದರಾಬಾದ್ ನ ಮಿಯಾಪುರ ಠಾಣೆಯಲ್ಲಿ ರಾಣಾ ದಗ್ಗುಬಾಟಿ , ವಿಜಯ್ ದೇವರಕೊಂಡ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ.
ಮಂಚು ಲಕ್ಷ್ಮಿ, ಪ್ರಣೀತಾ, ನಿಧಿ ಅಗರ್ವಾಲ್ ಮತ್ತು ನಿರೂಪಕರಾದ ರಿತು ಚೌಧರಿ, ಶ್ಯಾಮಲಾ, ಶ್ರೀಮುಖಿ ಮತ್ತು ವಿಷ್ಣುಪ್ರಿಯಾ ವಿರುದ್ಧ ಪ್ರಕರಣ ದಾಖಲಾಗಿದೆ. ಯೂಟ್ಯೂಬರ್ ವರ್ಷಿಣಿ ಸೇರಿದಂತೆ ಒಟ್ಟು 25 ಜನರ ವಿರುದ್ಧ ಪ್ರಕರಣಗಳು ದಾಖಲಾಗಿವೆ.