ಬೆಂಗಳೂರು : ರಾಜಧಾಮನಿ ಬೆಂಗಳೂರಿನಲ್ಲಿ ಪುಂಡರ ಹಾವಳಿ ಮಿತಿ ಮೀರಿದ್ದು, ಕಾರಿನಲ್ಲಿ ಮಗು ಇದ್ರೂ ಕಿರಿಕ್ ಮಾಡಿ ಕಾರಿನ ಗ್ಲಾಸ್ ಒಡೆದು ಪುಂಡಾಟ ಮೆರೆದಿದ್ದ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಸರ್ಜಾಪುರ ಮುಖ್ಯರಸ್ತೆಯ ದೊಡ್ಡಕನ್ನಹಳ್ಳಿಯಲ್ಲಿ ಕುಟುಂಬವೊಂದು ಕಾರಿನಲ್ಲಿ ಹೋಗುತ್ತಿದ್ದಾಗ ಪುಂಡನೊಬ್ಬ ಕಾರು ಅಡ್ಡಗಟ್ಟಿ ಪುಂಡಾಟ ನಡೆಸಿದ್ದು, ಕಾರಿನ ಗ್ಲಾಸ್ ಒಡೆದು ಹಾಕಿ ದಾಂಧಲೆ ನಡೆಸಿದ್ದಾನೆ. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಕಾರಿನ ಚಾಲಕ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಆರೋಪಿ ಅನಿಲ್ ರೆಡ್ಡಿ ಇದೀಗ ಪೊಲೀಸರು ಬಂಧಿಸಿದ್ದಾರೆ.
ಕಾರಿನಲ್ಲಿ ಪುಟ್ಟ ಮಗು ಇದೆ ಬಿಟ್ಟು ಬಿಡಿ ಎಂದು ಹೇಳಿದ್ರೂ ಯುವಕ ಪುಂಡಾಟ ನಡೆಸಿದ್ದು, ಕಾರಿನ ವೈಪರ್ ಕಿತ್ತು ಹಾಕಿ , ಗ್ಲಾಸ್ ಒಡೆದು ಪಾರಿಯಾಗಿದ್ಆನೆ ಆಗಿದ್ದಾನೆ. ಪುಂಡನ ಕೃತ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.