ಬಳ್ಳಾರಿ : 16 ಲಕ್ಷ ಹಣದ ಸಮೇತ ಬಳ್ಳಾರಿ ಆರ್ ಟಿಒ ಕಚೇರಿ ನೌಕರರೊಬ್ಬರು ಪರಾರಿಯಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿಯ ಆರ್ ಟಿಒ ಕಚೇರಿಯ ನೌಕರ ರವಿ ತಾವರಕೆಡ ಎಂಬಾತ ವಾಹನ ತೆರಿಗೆ ಮತ್ತು ಶುಲ್ಕದ ಹಣ ಪಡೆದು ನಾಪತ್ತೆಯಾಗಿದ್ದಾನೆ. ಬಳ್ಳಾರಿ RTO ಟ್ರಿಜರಿ ವಿಭಾಗಲದಲ್ಲಿ ರವಿ ಕೆಲಸ ಮಾಡುತ್ತಿದ್ದ.
ಮೇ. 21 ಹಾಗೂ ಮೇ 26 ರಿಂದ 31 ರವರೆಗೆ ಸಂಗ್ರಹಿಸಿದ್ದ 16,72,518 ರೂ.ಪಡೆದು ರವಿ ಎಸ್ಕೇಪ್ ಆಗಿದ್ದಾನೆ.