ನವದೆಹಲಿ : ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಆಗಸ್ಟ್ 2025 ರಲ್ಲಿ ಬಾಂಗ್ಲಾದೇಶ ಮತ್ತು ಭಾರತ ನಡುವಿನ ವೈಟ್-ಬಾಲ್ ಸರಣಿಯನ್ನು ಸೆಪ್ಟೆಂಬರ್ 2026 ಕ್ಕೆ ಮುಂದೂಡಲು ಪರಸ್ಪರ ಒಪ್ಪಿಕೊಂಡಿವೆ. ಭಾರತ ಮತ್ತು ಬಾಂಗ್ಲಾದೇಶ ಆಗಸ್ಟ್ 17 ರಿಂದ ಮೂರು ODI ಮತ್ತು ಅಷ್ಟೇ T20I ಗಳಲ್ಲಿ ಮುಖಾಮುಖಿಯಾಗಲು ನಿರ್ಧರಿಸಲಾಗಿತ್ತು.
ಅಂತರರಾಷ್ಟ್ರೀಯ ಕ್ರಿಕೆಟ್ ಬದ್ಧತೆಗಳು ಮತ್ತು ಎರಡೂ ತಂಡಗಳ ವೇಳಾಪಟ್ಟಿಯ ಅನುಕೂಲವನ್ನು ಗಣನೆಗೆ ತೆಗೆದುಕೊಂಡು ಎರಡೂ ಮಂಡಳಿಗಳ ನಡುವಿನ ಚರ್ಚೆಗಳ ನಂತರ ಈ ನಿರ್ಧಾರಕ್ಕೆ ಬರಲಾಗಿದೆ.
ಈ ಕುತೂಹಲಕಾರಿ ಸರಣಿಗಾಗಿ ಸೆಪ್ಟೆಂಬರ್ 2026ರಲ್ಲಿ ಭಾರತವನ್ನ ಸ್ವಾಗತಿಸಲು ಬಿಸಿಬಿ ಎದುರು ನೋಡುತ್ತಿದೆ. ಪ್ರವಾಸದ ಪರಿಷ್ಕೃತ ದಿನಾಂಕಗಳು ಮತ್ತು ಪಂದ್ಯಗಳನ್ನ ಸರಿಯಾದ ಸಮಯದಲ್ಲಿ ಘೋಷಿಸಲಾಗುವುದು.
ಗುಜರಾತ್’ನಲ್ಲಿ ‘ನಿಗೂಢ ವೈರಸ್’ನಿಂದ ಆತಂಕ, ಮೂವರು ಮಕ್ಕಳು ಸಾವು, ‘ICMR’ ತಂಡದಿಂದ ತನಿಖೆ
ಸಿಎಂ ಸಿದ್ದರಾಮಯ್ಯ ವಿರುದ್ಧ ಕ್ರಮವಿಲ್ಲ ಏಕೆ?: ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನೆ