ಬೆಂಗಳೂರು : ಬೆಂಗಳೂರಿನ ವೈಯಾಲಿಕಾವಲ್ ನ ಮಹಾಲಕ್ಷ್ಮಿ ಭೀಕರ ಹತ್ಯೆ ಪ್ರಕರಣದ ಆರೋಪಿ ಮುಕ್ತಿ ರಂಜನ್ ರಾಯ್ ಎನ್ನುವ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದು, ಇದೀಗ ಆತನ ಡೆತ್ ನೋಟ್ ಪತ್ತೆಯಾಗಿದ್ದು, ಸ್ಪೋಟಕ ರಹಸ್ಯ ಬಯಲಾಗಿದೆ.
ಹೌದು, ಮಹಾಲಕ್ಷ್ಮಿಯನ್ನು ಭೀಕರವಾಗಿ ಕೊಂದು ಮುಕ್ತಿ ರಂಜನ್ ರಾಯ್ ಬೆಂಗಳೂರು ಬಿಟ್ಟು ಪರಾರಿಯಾಗಿದ್ದ. ಆತ ಪಶ್ಚಿಮ ಬಂಗಾಳದಲ್ಲಿ ಇದ್ದಾನೆ ಎಂದು ಪೊಲೀಸರಿಗೆ ಮಾಹಿತಿ ದೊರಕಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಆತನನ್ನು ಬಂದಿಸಲು ಬೆಂಗಳೂರಿನಿಂದ ಒಂದು ತಂಡ ತೆರಳಿತ್ತು. ಇದೀಗ ಮಹಾಲಕ್ಷ್ಮಿ ಕೊಲೆ ಆರೋಪಿ ಆಗಿರುವಂತಹ ಮುಕ್ತಿ ರಂಜನ್ ರಾಯ್ ಒಡಿಶಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ಆತ್ಮಹತ್ಯೆಗೆ ಮುನ್ನ ಆತ ಬರೆದಿಟ್ಟಿದ್ದ ಡೆತ್ ನೋಟ್ ಪತ್ತೆಯಾಗಿದೆ.
ಹಂತಕನ ಡೆತ್ ನೋಟ್
ಸೆಪ್ಟೆಂಬರ್ 3 ರಂದು ನಾನು ಬೆಂಗಳೂರಿನ ಮಹಾಲಕ್ಷ್ಮಿ ಮನೆಗೆ ಹೋಗಿದ್ದೆ. ವೈಯಕ್ತಿಕವಾಗಿ ಆಕೆ ನನ್ನೊಂದಿಗೆ ಜಗಳ ಮಾಡುತ್ತಿದ್ದಳು. ಹೀಗಾಗಿ ಸೆ.3 ರಂದು ಮಹಾಲಕ್ಷ್ಮಿಯನ್ನು ಹತ್ಯೆ ಮಾಡಿದ್ದೇನೆ ಎಂದು ಮುಕ್ತಿ ರಂಜನ್ ರಾಯ್ ಡೆತ್ ನೋಟ್ ನಲ್ಲಿ ಬರೆದಿದ್ದಾನೆ.
ಮಹಾಲಕ್ಷ್ಮಿ ನನ್ನ ಮೇಲೆ ಹಲ್ಲೆ ಮಾಡಿದ್ದಳು. ಇದರಿಂದ ಕೋಪಗೊಂಡು ನಾನು ಅವಳನ್ನು ಹತ್ಯೆ ಮಾಡಿದ್ದೇನೆ. ಕೊಲೆ ಮಾಡಿದ ಬಳಿಕ ದೇಹವನ್ನು 59 ಪೀಸ್ ಮಾಡಿ ಫ್ರಿಡ್ಜ್ ನಲ್ಲಿ ಇಟ್ಟಿದ್ದೆ. ಆಕೆಯ ವರ್ತನೆಯಿಂದ ಬೇಸೆತ್ತು ಈ ಕೃತ್ಯ ಮಾಡಿದ್ದೇನೆ ಎಂದು ಬರೆದಿದ್ದಾನೆ.
ಪ್ರಕರಣದ ಹಿನ್ನೆಲೆ?
ಕೆಲ ಹಿಂದೆ ಬೆಂಗಳೂರಿನ ವೈಯ್ಯಾಲಿಕಾವಲ್ ನಲ್ಲಿ ನೇಪಾಳಿ ಮೂಲದ ಮಹಾಲಕ್ಷ್ಮಿ ಎನ್ನುವ ಮಹಿಳೆಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೊಲೆ ಆರೋಪಿಯ ಫೋಟೋ ಪತ್ತೆಯಾಗಿದ್ದು, ಹಂತಕನನ್ನು ಒರಿಸ್ಸಾ ಮೂಲದ ಮಹಾಲಕ್ಷ್ಮಿಯ ಸಹೋದ್ಯೋಗಿ ಮುಕ್ತಿ ರಂಜನ್ ರಾಯ್ ಎಂದು ತಿಳಿದು ಬಂದಿದೆ.
ಹೌದು ಒಡಿಶಾ ಮೂಲದ ಮುಕ್ತಿ ರಂಜನ್ ರಾಯ್ ಹೆಬ್ಬಗೋಡಿಯಲ್ಲಿ ನೆಲೆಸಿದ್ದನು. ತಮ್ಮನೊಂದಿಗೆ ಹೆಬ್ಬಗೋಡಿಯಲ್ಲಿ ವಾಸವಿದ್ದು ಪ್ರತಿನಿತ್ಯ ಮಲ್ಲೇಶ್ವರಂನ ಫ್ಯಾಶನ್ ಫ್ಯಾಕ್ಟರಿಯಲ್ಲಿ ಟೀಂ ಹೆಡ್ ಆಗಿ ಕೆಲಸ ಮಾಡುತ್ತಿದ್ದನು. ಈ ವೇಳೆ ಅದೇ ಸ್ಟೋರ್ನಲ್ಲಿ ಕೆಲಸ ಮಾಡುತ್ತಿದ್ದ ಮಹಾಲಕ್ಷ್ಮಿಯನ್ನ ರಂಜನ್ ಪ್ರೀತಿಸುತ್ತಿದ್ದನು.
ಆದರೆ ಇಬ್ಬರ ಮಧ್ಯ ಅದೇನು ಮನಸ್ತಾಪ ಉಂಟಾಯಿತು ಗೊತ್ತಿಲ್ಲ. ಸೆಪ್ಟೆಂಬರ್ 1 ರಂದು ಮಹಾಲಕ್ಷ್ಮಿ ಹಾಗೂ ಮುಕ್ತಿ ರಂಜನ್ ಇಬ್ಬರು ಕೆಲಸಕ್ಕೆ ಹಾಜರಾಗಿದ್ದಾರೆ. ಬಳಿಕ ಸೆಪ್ಟೆಂಬರ್ 2ರಿಂದ ಮಹಾಲಕ್ಷ್ಮಿ ವಾರದ ರಜೆ ತೆಗೆದುಕೊಂಡಿದ್ದಾಳೆ. ಸೆಪ್ಟೆಂಬರ್ 2ರಂದು ತಾಯಿಯನ್ನು ಭೇಟಿಯಾಗಲು ತಾಯಿಯ ಮನೆಗೆ ಬರುವುದಾಗಿ ಕುಟುಂಬಸ್ಥರಿಗೆ ತಿಳಿಸಿದ್ದಾಳೆ.
ಆದರೆ ಅಷ್ಟರಲ್ಲಿ ಆರೋಪಿ ಮುಕ್ತಿ ರಂಜನ್ ಮಹಾಲಕ್ಷ್ಮಿಯ ಕಥೆ ಮುಗಿಸಿದ್ದಾನೆ.ಆಕೆಯನ್ನು ಭೀಕರವಾಗಿ ಕೊಂದು ತುಂಡು ತುಂಡಾಗಿ ಕತ್ತರಿಸಿ, ಮಹಾಲಕ್ಷ್ಮಿಯನ್ನು ಭೀಕರವಾಗಿ ಕೊಂದು ಆಕೆಯ ಮೃತ ದೇಹವನ್ನು ಕತ್ತರಿಸಿ ಫ್ರಿಜ್ ನಲ್ಲಿ ಇಟ್ಟು ಪರಾರಿಯಾಗಿದ್ದಾನೆ. ಸದ್ಯ ಆರೋಪಿ ಮುಕ್ತಿ ರಂಜನ್ ಪಶ್ಚಿಮ ಬಂಗಾಳದಲ್ಲಿ ಇದ್ದು ಪೊಲೀಸರಿಂದ ಕಣ್ತಪ್ಪಿಸಿ ಓಡಾಡುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.ಇದೀಗ ಕೊಲೆ ಆರೋಪಿಯಾಗಿರುವಂತಹ ಮುಕ್ತಿ ರಂಜನ್ ರಾಯ್ ಎನ್ನುವ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ.