ನವದೆಹಲಿ : ಮುಂಬರುವ ಲೋಕಸಭಾ ಚುನಾವಣೆಯ ವೇಳಾಪಟ್ಟಿಯಿಂದಾಗಿ UPSC CSE ಪರೀಕ್ಷೆಯನ್ನ ಮುಂದೂಡಲಾಗಿದ್ದು, ಜೂನ್ 16, 2024ರಂದು ನಡೆಸಲಾಗುವುದು. ಅಂದ್ಹಾಗೆ, ಈ ಮೊದಲು ಮೇ 26ರಂದು ಪರೀಕ್ಷೆ ನಿಗದಿಯಾಗಿತ್ತು.
ಆಯೋಗ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ “ಮುಂಬರುವ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯಿಂದಾಗಿ, ಆಯೋಗವು ನಾಗರಿಕ ಸೇವೆಗಳ (ಪ್ರಾಥಮಿಕ) ಪರೀಕ್ಷೆ – 2024ಯನ್ನ ಮುಂದೂಡಲು ನಿರ್ಧರಿಸಿದೆ, ಇದು ಭಾರತೀಯ ಅರಣ್ಯ ಸೇವೆಗಳ ಪರೀಕ್ಷೆ, 2024 ರ ಸ್ಕ್ರೀನಿಂಗ್ ಪರೀಕ್ಷೆಯಾಗಿ ಕಾರ್ಯನಿರ್ವಹಿಸುತ್ತದೆ, ಇದು 26-05-2024 ರಿಂದ 16-06-2024 ರವರೆಗೆ ಮುಂದೂಡಲು ನಿರ್ಧರಿಸಿದೆ” ಎಂದು ತಿಳಿಸಿದೆ.
‘ಕಾಂಗ್ರೆಸ್ ಅಭ್ಯರ್ಥಿ’ಯಿಂದ ಚುನಾವಣಾ ಅಕ್ರಮ: ‘ಕುಕ್ಕರ್, ಹಣ ಹಂಚಿಕೆ’ ದಾಖಲೆ ಬಿಡುಗಡೆ ಮಾಡಿದ ‘HDK’
IPL 2024ರಲ್ಲಿ ಹೊಸ ‘ಸ್ಮಾರ್ಟ್ ರಿಪ್ಲೇ ಸಿಸ್ಟಮ್’ ಪರಿಚಯಿಸಿದ ‘BCCI’