ಬೆಂಗಳೂರು : ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಫ್ರೀಡಂ ಪಾರ್ಕ್‌ನಲ್ಲಿ ದಿನಾಂಕ 12.03.2026 ರಂದು ಬೃಹತ್ ಪ್ರತಿಭಟನೆಯಿದ್ದು ಪ್ರತಿಭಟನೆಯ ಸಂದರ್ಭದಲ್ಲಿ ಶೇಷಾದ್ರಿ ರಸ್ತೆಯ ಮೂಲಕ ಜನರು ಮತ್ತು ವಾಹನಗಳು ಪ್ರತಿಭಟನೆಗೆ ಆಗಮಿಸುವ ಕಾರಣ ಫ್ರೀಡಂ ಪಾರ್ಕ್ ಸುತ್ತ ಮುತ್ತ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದ್ದು, ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಠಿಯಿಂದ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗವನ್ನು ಕಲ್ಪಿಸಿರುತ್ತದೆ. ಆದ್ದರಿಂದ ಸಾರ್ವಜನಿಕರು ಸಹಕರಿಸಲು ಕೋರಿದೆ.
ತಾತ್ಕಾಲಿಕವಾಗಿ ಕೆಳಕಂಡಂತೆ ಸಂಚಾರ ನಿರ್ಭಂದ :
ಶಾಂತಲಾ ಜಂಕ್ಷನ್ ಮತ್ತು ಖೋಡ್ ಸರ್ಕಲ್ ನಿಂದ ಆನಂದ ರಾವ್ ಪ್ರೈ ಓವರ್, ಓಲ್ಡ್ ಜೆ.ಡಿ.ಎಸ್. ಕ್ರಾಸ್, ಶೇಷಾದ್ರಿ ರಸ್ತೆಯಿಂದ ಫ್ರೀಡಂ ಪಾರ್ಕ್ ವರೆಗೆ
ಪರ್ಯಾಯ ಮಾರ್ಗಗಳು
ಲುಲು ಮಾಲ್, ಕೆಎಫ್‌ಎಂ, ರಾಜೀವ್ ಗಾಂಧಿ ಸರ್ಕಲ್, ಮಂತ್ರಿ ಮಾಲ್, ಸ್ವಸ್ತಿಕ್ ಸರ್ಕಲ್, ಶೇಷಾದ್ರಿಪುರಂ, ನೆಹರು ಸರ್ಕಲ್, ರೇಸ್ ಕೋರ್ಸ್ ಪ್ರೈ ಓವರ್, ರೇಸ್ ಕೋರ್ಸ್ ರಸ್ತೆ.
> ಮೈಸೂರು ಬ್ಯಾಂಕ್ ಕಡೆಯಿಂದ ಚಾಲುಕ್ಯ ಸರ್ಕಲ್ ಕಡೆಗೆ
ಕೆ.ಜಿ ರಸ್ತೆ, ಮೈಸೂರು ಬ್ಯಾಂಕ್ ಜಂಕ್ಷನ್, ಸಾಗರ್ ಜಂಕ್ಷನ್, ಕೆ.ಜಿ ಜಂಕ್ಷನ್, ಎಲೈಟ್, ಟಿಬಿ ರಸ್ತೆ, ಕೆ.ಎಫ್.ಎಂ, ರಾಜೀವ್ ಗಾಂಧಿ ಸರ್ಕಲ್, ಸ್ವಸ್ತಿಕ್, ನೆಹರು ಸರ್ಕಲ್, ರೇಸ್ ಕೋರ್ಸ್ ಪ್ರೈ ಓವರ್ ರಸ್ತೆ ಮೂಲಕ ಸಂಚರಿಸುವುದು.
ಚಾಲುಕ್ಯ ಸರ್ಕಲ್ ನಿಂದ ಮೈಸೂರು ಬ್ಯಾಂಕ್ ಕಡೆಗೆ
ಪರ್ಯಾಯ ಮಾರ್ಗಗಳು
ಚಾಲುಕ್ಯ ಸರ್ಕಲ್, ಎಲ್‌ಆರ್‌ಡಿ, ರಾಜಭವನ ರಸ್ತೆ, ಇನ್ ಪೆಂಟ್ರಿ ರಸ್ತೆ, ಇಂಡಿಯನ್ ಎಕ್ಸ್ ಪ್ರೆಸ್ ನಿಂದ ತೆರಳುವುದು.
ಕನಕದಾಸ ಜಂಕ್ಷನ್‌ನಿಂದ ಸ್ವಾತಂತ್ರ್ಯ ಉದ್ಯಾನವನದ ಕಡೆಗೆ ಕಾಳಿದಾಸ ರಸ್ತೆ
ಪರ್ಯಾಯ ಮಾರ್ಗಗಳು
ಕನಕದಾಸ ಜಂಕ್ಷನ್ ಬಲ ತಿರುವು ಸಾಗರ ಜಂಕ್ಷನ್ ಕಡೆಗೆ
ಮೌರ್ಯ/ಸುಬ್ಬಣ್ಣ ಜಂಕ್ಷನ್ ನಿಂದ ಫ್ರೀಡಂ ಪಾರ್ಕ್ ಕಡೆಗೆ
ಪರ್ಯಾಯ ಮಾರ್ಗಗಳು
ಸುಬ್ಬಣ್ಣ ಜಂಕ್ಷನ್ ನಿಂದ ಬಲ ತಿರುವು ಆನಂದ್ ರಾವ್ ಸರ್ಕಲ್ ಕಡೆಗೆ
ಮೇಲ್ಕಂಡ ಬದಲಾವಣೆಗೆ ಸಾರ್ವಜನಿಕರ ಸಹಕಾರ ಕೋರಲಾಗಿದೆ.








