ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ ಪೈಶಾಚಿಕ ಕೃತ್ಯ ನಡೆದಿದ್ದು, ಕಿರಿಯ ವಿದ್ಯಾರ್ಥಿಗಳ ಮೇಲೆ ಹಿರಿಯ ವಿದ್ಯಾರ್ಥಿಗಳು ಹಲ್ಲೆ ನಡೆಸಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ.
ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಜವಹಾರಲಾಲ್ ನೆಹರೂ ನವೋದಯ ಶಾಲೆಯಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳ ಮೇಲೆ ಪಿಯು ವಿದ್ಯಾರ್ಥಿಗಳು ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದ್ದು, ಪಿಯು ವಿದ್ಯಾರ್ಥಿಗಳ ಪುಂಡಾಟಕ್ಕೆ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಭಯದ ವಾತವಾರಣ ನಿರ್ಮಾಣವಾಗಿದೆ.
ನವೋದಯ ಶಾಲೆಯಲ್ಲಿ ಹೈಸ್ಕೂಲಿನ 60 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಕಟ್ಟಿಗೆ, ಬೆಲ್ಟ್ ನಿಂದ ಹಲ್ಲೆ ಮಾಡಿದ್ದಲ್ಲದೇ ಕೆಲವ ವಿದ್ಯಾರ್ಥಿಗಳ ಮರ್ಮಾಂಗಕ್ಕೆ ಒದ್ದು ವಿಕೃತಿ ಮೆರೆದಿದ್ದಾರೆ. ಆದರೆ ಇದುವರೆಗೂ ಪಿಯು ವಿದ್ಯಾರ್ಥಿಗಳ ಪುಂಡಾಟಕ್ಕೆ ಪ್ರಾಂಶುಪಾಲರು ಕಡಿವಾಣ ಹಾಕಿಲ್ಲ.