ನವದೆಹಲಿ : ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸಿಬಿಐನಿಂದ ಬಂಧಿಸಲ್ಪಟ್ಟ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವ್ರು ಮನೀಶ್ ಸಿಸೋಡಿಯಾ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ತನಿಖಾ ಸಂಸ್ಥೆ ಮಾಡಿದ ಹೇಳಿಕೆಗಳು ತಪ್ಪು ಮತ್ತು ಸಿಸೋಡಿಯಾ ನಿರಪರಾಧಿ ಎಂದು ಬುಧವಾರ ಹೇಳಿದ್ದಾರೆ.
ದೆಹಲಿ ರೂಸ್ ಅವೆನ್ಯೂ ನ್ಯಾಯಾಲಯವನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, “ನಾನು ಮನೀಶ್ ಸಿಸೋಡಿಯಾ ವಿರುದ್ಧ ಹೇಳಿಕೆ ನೀಡಿದ್ದೇನೆ ಎಂದು ಸಿಬಿಐ ಹೇಳುತ್ತಿದೆ, ಇದು ತಪ್ಪು. ಮನೀಶ್ ಸಿಸೋಡಿಯಾ ನಿರಪರಾಧಿ, ಆಮ್ ಆದ್ಮಿ ಪಕ್ಷ ನಿರಪರಾಧಿ ಮತ್ತು ನಾನು ಕೂಡ ನಿರಪರಾಧಿ” ಎಂದು ಹೇಳಿದ್ದಾರೆ.
Arvind Kejriwal addresses the court, he says "CBI is claiming that I have given statements against Manish Sisodia, this is wrong. Manish Sisodia is innocent, the Aam Aadmi Party is innocent and I am also innocent."
— ANI (@ANI) June 26, 2024
ಎಎಪಿ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಅವರನ್ನ ಕಸ್ಟಡಿ ವಿಚಾರಣೆಗೆ ಒಳಪಡಿಸುವಂತೆ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನ ದೆಹಲಿ ನ್ಯಾಯಾಲಯ ಕಾಯ್ದಿರಿಸಿದೆ.
BREAKING : ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ‘ಮನೀಶ್ ಸಿಸೋಡಿಯಾ’ ವಿರುದ್ಧ ‘ಅರವಿಂದ್ ಕೇಜ್ರಿವಾಲ್’ ಆರೋಪ : ವರದಿ
BREAKING: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಪ್ರಕರಣ ಬೆಳಕಿಗೆ: ‘ಮಕ್ಕಳ ಮಾರಾಟದ ಗ್ಯಾಂಗ್’ ಪತ್ತೆ, 6 ಮಂದಿ ಅರೆಸ್ಟ್