ನವದೆಹಲಿ : ಅರುಣೀಶ್ ಚಾವ್ಲಾ ಅವರನ್ನ ಹೊಸ ಕಂದಾಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದು ಸರ್ಕಾರ ಬುಧವಾರ ಅಧಿಕೃತ ಸುತ್ತೋಲೆಯಲ್ಲಿ ಪ್ರಕಟಿಸಿದೆ. ಈ ಹಿಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆಗಿ ನೇಮಕಗೊಂಡಿದ್ದ ಸಂಜಯ್ ಮಲ್ಹೋತ್ರಾ ಅವರ ಉತ್ತರಾಧಿಕಾರಿಯಾಗಿ ಅರುಣೀಶ್ ಚಾವ್ಲಾ ನೇಮಕಗೊಂಡಿದ್ದಾರೆ.
ಬಿಹಾರ ಕೇಡರ್ನ 1992ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಚಾವ್ಲಾ ಪ್ರಸ್ತುತ ಫಾರ್ಮಾಸ್ಯುಟಿಕಲ್ಸ್ ಕಾರ್ಯದರ್ಶಿಯಾಗಿದ್ದಾರೆ. ಸಿಬ್ಬಂದಿ ಸಚಿವಾಲಯದ ಆದೇಶದ ಪ್ರಕಾರ ಅವರನ್ನ ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಈ ತಿಂಗಳ ಆರಂಭದಲ್ಲಿ ಸಂಜಯ್ ಮಲ್ಹೋತ್ರಾ ಅವರನ್ನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆಗಿ ನೇಮಿಸಿದ ನಂತರ ಕಂದಾಯ ಕಾರ್ಯದರ್ಶಿ ಹುದ್ದೆ ಖಾಲಿಯಾಗಿತ್ತು. ಚಾವ್ಲಾ ಅವರು ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿಯ ಹೆಚ್ಚುವರಿ ಜವಾಬ್ದಾರಿಯನ್ನ ನಿಯಮಿತವಾಗಿ ನೇಮಕವಾಗುವವರೆಗೂ ಮುಂದುವರಿಸಲಿದ್ದಾರೆ ಎಂದು ಅದು ಹೇಳಿದೆ.
ತಂದೆ ಮರಣದ ಬಳಿಕ ಮಗ ‘ಸಾಲ’ ಮರುಪಾವತಿಸ್ಬೇಕಾ.? ‘ಕಾನೂನು’ ಹೇಳೋದೇನು ಗೊತ್ತಾ.?
BREAKING : ಗೋವಾ ಬೀಚ್’ನಲ್ಲಿ ದೋಣಿ ಮುಳುಗಡೆ ; ಓರ್ವ ಸಾವು, 13 ಜನರ ರಕ್ಷಣೆ |Boat capsizes