ಕೋಲ್ಕತ್ತಾ : ಪಶ್ಚಿಮ ಬಂಗಾಳದ ಅಲಿಪುರ್ದಾರ್ ವಿಭಾಗದ ನ್ಯೂ ಮೇನಗುರಿ ನಿಲ್ದಾಣದಲ್ಲಿ ಗೂಡ್ಸ್ ರೈಲಿನ ಐದು ಬೋಗಿಗಳು ಹಳಿತಪ್ಪಿದವು. ಗೂಡ್ಸ್ ರೈಲು ಖಾಲಿಯಾಗಿದ್ದು, ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.
ಅಪಘಾತದ ನಂತರ, ರೈಲುಗಳನ್ನು ಪರ್ಯಾಯ ಮಾರ್ಗಗಳ ಮೂಲಕ ಕಳುಹಿಸಲಾಗಿದೆ. ಆದರೆ, ಸಂಚಾರಕ್ಕೆ ತೊಂದರೆಯಾಗಿಲ್ಲ. ಹಿರಿಯ ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ದುರಸ್ತಿ ಕಾರ್ಯ ನಡೆಯುತ್ತಿದೆ.
ಬೆಳಗ್ಗೆ 6.24ಕ್ಕೆ ಗೂಡ್ಸ್ ರೈಲು ಹಳಿತಪ್ಪಿತು ಎಂದು ಜಲ್ಪೈಗುರಿ ನಿಲ್ದಾಣದ ಅಧೀಕ್ಷಕ ಮುಖೇಶ್ ಕುಮಾರ್ ತಿಳಿಸಿದ್ದಾರೆ. ಯಾವುದೇ ಪ್ರಾಣಹಾನಿಯಾಗಿರುವ ಸುದ್ದಿಯಿಲ್ಲ. ಎರಡು ಸಾಲುಗಳನ್ನು ಮುಚ್ಚಲಾಗಿದೆ. ಸಂಚಾರ ವ್ಯವಸ್ಥೆ ಸುಧಾರಿಸುವ ಕೆಲಸ ನಡೆಯುತ್ತಿದೆ.
#WATCH पश्चिम बंगाल के अलीपुरद्वार डिवीजन के न्यू मयनागुड़ी स्टेशन पर एक खाली मालगाड़ी के 5 डिब्बे पटरी से उतर गए। ट्रेनों को वैकल्पिक मार्गों से भेजा गया है और आवागमन प्रभावित नहीं हुआ है। अलीपुरद्वार के DRM समेत वरिष्ठ अधिकारी घटनास्थल पर पहुंच गए हैं। मरम्मत का काम जारी है:… pic.twitter.com/9qiOofEKou
— ANI_HindiNews (@AHindinews) September 24, 2024