ಬೆಂಗಳೂರು : ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜೈಲುಪಾಲಾಗಿರುವ ಬಿಜೆಪಿ ಶಾಸಕ ಮುನಿರತ್ನಗೆ ಇದೀಗ ಮತ್ತೊಂದು ಸಂಕಷ್ಟು ಶುರುವಾಗಿದ್ದು, ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕಾಮಗಾರಿ ನಡೆಸದೇ ಬಿಲ್ ಮಾಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶ ಹೊರಡಿಸಲಾಗಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈ ಸಂಬಂಧ ಆದೇಶ ಹೊರಡಿಸಿದ್ದಾರೆ. ಕ್ಷೇತ್ರಗಳ ಕಾಮಗಾರಿ ಸಂಬಂಧ ಕಾಮಗಾರಿ ನಡೆಸದೇ ಬಿಲ್ ಮಾಡಿಸಿಕೊಂಡ ಆರೋಪದಡಿ ತುಷಾರ್ ಗಿರಿನಾಥ್ ತನಿಖೆಗೆ ಆದೇಶಿಸಿದ್ದಾರೆ.
ಕಾಮಗಾರಿ ನಡೆಸದೇ ಬಿಲ್ ಮಾಡಿಸಿಕೊಂಡ ಆರೊಪದ ತನಿಖೆಗೆ ಬಿಬಿಎಂಪಿ ಕಂದಾಯ ವಿಶೇಷ ಕಮಿಷನರ್ ಮನೀಶ್ ಮೌದ್ಗಿಲ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ.