ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೋಜ್ ಪ್ರಕರಣ ವರದಿಯಾಗಿದ್ದು, ಕಾರು ಚಾಲಕನ ಮುಖಕ್ಕೆ ಆಟೋ ಚಾಲಕನೊಬ್ಬ ಉಗಿದು ದುರ್ವರ್ತನೆ ತೋರಿರುವ ಘಟನೆ ನಡೆದಿದೆ.
ಬೆಂಗಳೂರಿನ ಹೆಚ್ ಎಎಲ್ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕಾರು ಚಾಲಕನ ಮುಖಕ್ಕೆ ಆಟೋ ಚಾಲಕ ಉಗಿದು ದುರ್ವರ್ತೆ ತೋರಿದ್ದಾನೆ. ಕಾರಿಗೆ ಅಡ್ಡಲಾಗಿ ಆಟೋ ನಿಲ್ಲಿಸಿ ಉದ್ದಟತನ ಮೆರೆದಿದ್ದಾನೆ.
ಕಾರಿಗೆ ಅಡ್ಡ ಹಾಕಿ ನಿಲ್ಲಿಸಿ ಕಾರು ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸದಿ್ದಾರೆ. ಗ್ಲಾಸ್ ಇಳಿಸಿದ ಕಾರು ಚಾಲಕನ ಮುಖಕ್ಕೆ ಉಗುಳಿದ್ದಾನೆ. ಹೆಚ್ ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.