ಬೆಂಗಳೂರು : ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಕಾರ್ಯಕರ್ತೆ ನೀಡಿದ ದೂರಿನ ಆಧಾರದ ಮೇಲೆ ಶಾಸಕ ಮುನಿರತ್ನ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಬಿಜೆಪಿ ಕಾರ್ಯಕರ್ತೆ ಮುನಿರತ್ನ ಸೇರಿ ಬೆಂಬಲಿಗಾರದ ವಸಂತ್, ಚನ್ನಕೇಶವ ವಿರುದ್ಧ ದೂರು ದಾಖಲಿಸಿದ್ದಾರೆ. 2013 ರಲ್ಲಿ ಸಾಮೂಹಿಕ ಅತ್ಯಾಚಾರ ಎಂದು ಮಹಿಳೆ ದೂರು ನೀಡಿದ್ದು, ಜೆಪಿ ಪಾರ್ಕ್ ನ ಶಾಸಕರ ಕಚೇರಿಯಲ್ಲಿ ಅತ್ಯಾಚಾರ ಎಸಗಲಾಗಿತ್ತು ಎಂದು ಆರೋಪಿಸಿದ್ದಾರೆ.
ಅಪರಿಚಿತನಿಂದ ಇಂಜೆಕ್ಷನ್ ತರಿಸಿ ಇಂಜೆಕ್ಟ್ ಮಾಡಿದ್ದಾರೆ. ಇಂಜೆಕ್ಷನ್ ನಿಂದ ನನಗೆ ಇಡಿಆರ್ ಕಾಯಿಲೆಯಿದೆ ಎಂದು ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಮಹಿಳೆ ಆರೋಪಿಸಿದ್ದಾರೆ.