ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭಯಾನಕ ಮರ್ಡರ್ ಆಗಿದ್ದು, ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಚಿಕ್ಕಮ್ಮನನ್ನು ಮಗ ಕೊಲೆ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ದೊಮ್ಮಸಂದ್ರ ನಿವಾಸಿ ಚಂದ್ರಮ್ಮ (45) ಹತ್ಯೆಯಾದ ಮಹಿಳೆಯಾಗಿದ್ದು, ಚಂದ್ರಮ್ಮಳನ್ನು ವೆಂಕಟೇಶ್ ಎಂಬಾತ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.
ದೇವಸ್ಥಾನದಿಂದ ಮನೆಗೆ ವಾಪಸ್ ಬರುವಾಗಿ ನಡುರಸೆಯಲ್ಲಿ ಚಿಕ್ಕಮ್ಮಳ ಜತೆಗೆ ಜಗಳ ತೆಗೆದ ವೆಂಕಟೇಶ್ ಬಳಿಕ ತಲೆಗೆ ದೊಣ್ಣೆಯಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಚಂದ್ರಮ್ಮ ಸಾವನ್ನಪ್ಪಿದಾಳೆ