ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಮರ್ಡರ್ ಆಗಿದ್ದು, ಮನೆ ನಿರ್ಮಾಣ ವಿಚಾರಕ್ಕೆ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ವಿಟ್ಟಸಂದ್ರದ ಬಳಿ ವೇಣುಗೋಪಾಲ್ ಎಂಬುವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಮನೆ ನಿರ್ಮಾಣ ವಿಚಾರವಾಗಿ ವೇಣುಗೋಪಾಲ್-ರಾಧಾಕೃಷ್ಣ ನಡುವೆ ಗಲಾಟೆ ಆಗಿದ್ದು, ಈ ವೇಳೆ ರಾಧಾಕೃಷ್ಣ ಎಂಬುವರು ವೇಣುಗೋಪಾಲ್ ರನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.