ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಮರ್ಡರ್ ಆಗಿದ್ದು, ಸ್ನೇಹಿತನನ್ನೇ ವ್ಯಕ್ತಿಯೊಬ್ಬ ವಾಟರ್ ಹೀಟರ್ ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಶ್ರೀನಿವಾಸಪುರದಲ್ಲಿ ನಾಗರಾಜ್ ಎಂಬಾತ ಶ್ರೀನಿವಾಸ್ ನನ್ನು ವಾಟರ್ ಹೀಟರ್ ನಿಂದ ಹೊಡೆದ ಕೊಲೆ ಮಾಡಲಾಗಿದೆ. ಶ್ರೀನಿವಾಸ್ ಹಾಗೂ ನಾಗರಾಜ್ ಇಬ್ಬರು ಗಾರೆ ಕೆಲಸ ಮಾಡಿಕೊಂಡಿದ್ದರು. ಶ್ರೀನಿವಾಸ್ ಮದುವೆಯಾಗಿದ್ದರೂ ಪತ್ನಿಯನ್ನು ಬಿಟ್ಟು ಪ್ರತ್ಯೇಕವಾಗಿ ವಾಸವಾಗಿದ್ದ. ಕೊಲೆ ಆರೋಪಿ ನಾಗರಾಜ್ ಗೆ ಇನ್ನೂ ಮದುವೆಯಾಗಿರಲಿಲ್ಲ. ಇಬ್ಬರೂ ಶ್ರೀನಿವಾಸಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಶ್ರೀನಿವಾಸ್ ಹಾಗೂ ನಾಗರಾಜ್ ಜಗಳವಾಗಿದ್ದು, ಈ ವೇಳೆ ನಾಗರಾಜ್ ಕೋಪದ ಬರದಲ್ಲಿ ವಾಟರ್ ಹೀಟರ್ ನಿಂದ ಶ್ರೀನಿವಾಸ್ ಮೇಲೆ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಶ್ರೀನಿವಾಸ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.