ಕಲಬುರಗಿ : ಕಲಬುರಗಿಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ತಾಯಿ, ಮಗು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮಹಿಳೆ ಕುಟುಂಬಸ್ಥರು ಖಾಸಗಿ ಆಸ್ಪತ್ರೆಯ ಗಾಜು ಪುಡಿ ಪುಡಿ ಮಾಡಿ, ಪೀಠೋಪಕರಣ ಧ್ವಂಸ ಮಾಡಿದ್ದಾರೆ.
ಕಲಬುರಗಿ ನಗರದ MSK ಖಾಸಗಿ ಆಸ್ಪತ್ರೆಗೆ ಹೆರಿಗೆಗೆಂದು ನಿನ್ನೆ ಸಂಜೆ ಮಹಿಳೆ ಸಭಾ ಪರ್ವೀನ್ ದಾಖಲಾಗಿದ್ದರು. ಆದರೆ ಗರ್ಭದಲ್ಲೇ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಹೇಳಿದ್ದರು. ಬಳಿಕ ಬಾಣಂತಿಯೂ ಲೋಬಿಪಿಯಿಂದ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಆಕ್ರೋಶಗೊಂಡ ಪರ್ವೀನ್ ಕುಟುಂಬಸ್ಥರು ಆಸ್ಪತ್ರೆಯ ಗಾಜು ಪುಡಿ ಪುಡಿ ಮಾಡಿ, ಪೀಠೋಪಕರಣ ಧ್ವಂಸ ಮಾಡಿದ್ದಾರೆ. ಸ್ಥಳಕ್ಕೆ RJ ಠಾಣೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.