Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿದ ಭಾರತದ 1.7 ಮಿಲಿಯನ್ ಟನ್ ಇಂಧನ: ತೈಲ, ಗ್ಯಾಸ್ ಪೂರೈಕೆಯಲ್ಲಿ ಭಾರಿ ವ್ಯತ್ಯಯ!

18/03/2026 10:14 PM

ಪ್ರತಿ ಬಾರಿ ಬಾಚಿದಾಗ್ಲೂ ‘ಕೂದಲು’ ಉದುರುತ್ತಿಯೇ? ಎಚ್ಚರ, ಅಪಾಯಕಾರಿ ಕಾಯಿಲೆ ಸಂಕೇತವಾಗಿರ್ಬೋದು!

18/03/2026 9:58 PM

Good News ; ರೈತರಿಗೆ ಸಿಹಿ ಸುದ್ದಿ ; ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ, ‘ರಸಗೊಬ್ಬರ ಉತ್ಪಾದನೆ’ಗೆ 600 ಕೋಟಿ ರೂ. ಹಂಚಿಕೆ!

18/03/2026 9:38 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮತ್ತೊಬ್ಬ ಕನ್ನಡಿಗ ಬಲಿ : ಬೆಂಗಳೂರಿನ ಭರತ್ ಭೂಷಣ್ ಸಾವು.!
KARNATAKA

BREAKING : ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮತ್ತೊಬ್ಬ ಕನ್ನಡಿಗ ಬಲಿ : ಬೆಂಗಳೂರಿನ ಭರತ್ ಭೂಷಣ್ ಸಾವು.!

By kannadanewsnow5723/04/2025 7:18 AM

ಬೆಂಗಳೂರು: ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಭಯೋತ್ಪಾದಕರ ದಾಳಿಯಲ್ಲಿ ಶಿವಮೊಗ್ಗ ಮೂಲದ ಮಂಜುನಾಥ್ ಎಂಬುವರು ಬಲಿಯಾಗಿದ್ದಾರೆ. ಇವರಲ್ಲದೇ ಉಗ್ರರ ದಾಳಿಯಲ್ಲಿ ಮತ್ತೊಬ್ಬ ಕನ್ನಡಿಗ ಬಲಿಯಾಗಿರುವುದಾಗಿ ತಿಳಿದು ಬಂದಿದೆ. ಬೆಂಗಳೂರಿನ ಭರತ್ ಭೂಷಣ್ ಎಂಬುವರು ಉಗ್ರರ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್ ಕಣಿವೆಯಲ್ಲಿ ರಾಜಸ್ಥಾನದ ಪ್ರವಾಸಿಗರ ಗುಂಪಿನ ಮೇಲೆ ದಾಳಿ ನಡೆಸಲಾಯಿತು. ಕಣಿವೆಯ ಮೇಲ್ಭಾಗದಲ್ಲಿ ಗುಂಡಿನ ದಾಳಿ ನಡೆದಿತ್ತು.  ಇದೇ ಗುಂಡಿನ ದಾಳಿಯಲ್ಲಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಓರ್ವ ವ್ಯಕ್ತಿ ಬಲಿಯಾಗಿದ್ದಾರೆ. ಇಬ್ಬರು ಕನ್ನಡಿಗರು ಸೇರಿದಂತೆ ಒಟ್ಟು 28 ಮಂದಿ ಪ್ರವಾಸಿಗರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಹೌದು ಇನ್ನು ಉಗ್ರರ ಗುಂಡಿನ ದಾಳಿಯಲ್ಲಿ ಕರ್ನಾಟಕದ ಶಿವಮೊಗ್ಗ ನಗರದ ನಿವಾಸಿ ಮಂಜುನಾಥ್ ಇದೀಗ ಸಾವನಪ್ಪಿದ್ದಾರೆ. ಇನ್ನೊರ್ವ ಕನ್ನಡಿಗ ಅಭಿಜ್ಞಾ ರಾವ್ ಗೆ ಗಂಭೀರವಾದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಮಂಜುನಾಥ ಪತ್ನಿ ಪಲ್ಲವಿ ಮತ್ತು ಮಗ ಸುರಕ್ಷಿತವಾಗಿದ್ದಾರೆ. ಶಿವಮೊಗ್ಗದ ವಿಜಯನಗರ ನಿವಾಸಿ ಮೃತ ಮಂಜುನಾಥ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು ಎಂದು ತಿಳಿದುಬಂದಿದೆ.

ಉಗ್ರರ ದಾಳಿಯ ಭಯಾನಕತೆಯನ್ನು ಮೃತ ಮಂಜುನಾಥ್ ಪತ್ನಿ ಪಲ್ಲವಿ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದು, ನನ್ನ ಕೆಣ್ಣೆದುರಿಗೆ ನನ್ನ ಪತಿ ಮೃತಪಟ್ಟಿದ್ದಾರೆ. ನನಗೊಂದು ಫ್ಲೈಟ್ ಅರೇಂಜ್ ಮಾಡಿ ಕೊಡಿ ಎಂದು ಮೃತ ಮಂಜುನಾಥ್ ಪತ್ನಿ ಪಲ್ಲವಿ ಕಣ್ಣೀರಿಟ್ಟಿದ್ದಾರೆ. ಮಾಧ್ಯಮಗಳ ಮೂಲಕ ರಾಜ್ಯ ಸರ್ಕಾರಕ್ಕೆ ಪಲ್ಲವಿ ಮನವಿ ಮಾಡಿಕೊಂಡಿದ್ದಾರೆ.

ನನ್ನ ಗಂಡನನ್ನು ಸಾಯಿಸಿ ನನ್ನ ಮಗನನ್ನು ಬೈದು ಹಲ್ಲೆ ಮಾಡಿದ್ದಾರೆ. ನನ್ನ ಹಾಗು ನನ್ನ ಮಗನನ್ನು ಕೊಂದುಬಿಡು ಎಂದು ಹೇಳಿದ್ವಿ. ನಿನ್ನ ಕೊಲ್ಲಲ್ಲ ಹೋಗಿ ಮೋದಿಗೆ ಹೇಳು ಎಂದು ಉಗ್ರರು ಹೇಳಿದರು. ನನ್ನ ಪತಿ ಕೊಂದು ಉಗ್ರರು ಅಲ್ಲೇ ಓಡಾಡುತ್ತಿದ್ದರು. ಎಂದು ಮೃತ ಮಂಜುನಾಥ್ ಪತ್ನಿ ಪಲ್ಲವಿ ಮಾಧ್ಯಮಗಳಿಗೆ ಹೇಳಿದ್ದರು.

ಈ ಬೆನ್ನಲ್ಲೇ ಜಮ್ಮು-ಕಾಶ್ಮೀರದ ಅನಂತ್ ನಾಗ್ ನ ಪಹಲ್ಗಾಮ್ ನಲ್ಲಿ ನಡೆದಂತ ಉಗ್ರರ ಗುಂಡಿನ ದಾಳಿಯಲ್ಲಿ ಮತ್ತೊಬ್ಬ ಕನ್ನಡಿಗ ಬಲಿಯಾಗಿರುವುದಾಗಿ ತಿಳಿದು ಬಂದಿದೆ. ಉಗ್ರರ ದಾಳಿಯಲ್ಲಿ ಕನ್ನಡಿಗ, ಬೆಂಗಳೂರು ಮೂಲದ ಭರತ್ ಭೂಷಣ್ ಎಂಬುವರು ಸಾವನ್ನಪ್ಪಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಹೀಗಾಗಿ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಬಲಿಯಾದವರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.

BREAKING: Another Kannadigas killed in Pahalgam terrorist attack: Bharat Bhushan from Bengaluru dies!
Share. Facebook Twitter LinkedIn WhatsApp Email

Related Posts

ಐಟಿಎಂಎಸ್ (ITMS) ಸಂಚಾರ ದಂಡವನ್ನು ಆನ್‌ಲೈನ್ ಮೂಲಕ ಪಾವತಿಸುವುದು ಹೇಗೆ? ಇಲ್ಲಿದೆ ಮಾಹಿತಿ

18/03/2026 8:59 PM2 Mins Read

BREAKING: ಹೊಸ ಹಾಡನ್ನು ಬರೆದು ಬಿಡುಗಡೆ: ಸರ್ಸೆ ಸೆರಗ ಸರ್ಸೆ ಹಾಡಿಗೆ ಕ್ಷಮೆಯಾಚಿಸಿ ನಟ ಪ್ರೇಮ್‌

18/03/2026 8:50 PM1 Min Read

ಇನ್ಮುಂದೆ ಸಾಗರ ತಾಲ್ಲೂಕಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ಮನೆಗೆ ಬರಲಿದೆ ದಂಡದ ನೋಟಿಸ್!

18/03/2026 8:37 PM2 Mins Read
Recent News

ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿದ ಭಾರತದ 1.7 ಮಿಲಿಯನ್ ಟನ್ ಇಂಧನ: ತೈಲ, ಗ್ಯಾಸ್ ಪೂರೈಕೆಯಲ್ಲಿ ಭಾರಿ ವ್ಯತ್ಯಯ!

18/03/2026 10:14 PM

ಪ್ರತಿ ಬಾರಿ ಬಾಚಿದಾಗ್ಲೂ ‘ಕೂದಲು’ ಉದುರುತ್ತಿಯೇ? ಎಚ್ಚರ, ಅಪಾಯಕಾರಿ ಕಾಯಿಲೆ ಸಂಕೇತವಾಗಿರ್ಬೋದು!

18/03/2026 9:58 PM

Good News ; ರೈತರಿಗೆ ಸಿಹಿ ಸುದ್ದಿ ; ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ, ‘ರಸಗೊಬ್ಬರ ಉತ್ಪಾದನೆ’ಗೆ 600 ಕೋಟಿ ರೂ. ಹಂಚಿಕೆ!

18/03/2026 9:38 PM

BREAKING : ಹಾರ್ಮುಜ್ ಜಲಸಂಧಿಯಲ್ಲಿ ಹಡಗು ರಕ್ಷಿಸುವ ಅಮೆರಿಕ ನೇತೃತ್ವದ ಪ್ರಯತ್ನಕ್ಕೆ ‘UAE’ ಕೈಜೋಡಿಸ್ಬೋದು!

18/03/2026 9:13 PM
State News
KARNATAKA

ಐಟಿಎಂಎಸ್ (ITMS) ಸಂಚಾರ ದಂಡವನ್ನು ಆನ್‌ಲೈನ್ ಮೂಲಕ ಪಾವತಿಸುವುದು ಹೇಗೆ? ಇಲ್ಲಿದೆ ಮಾಹಿತಿ

By kannadanewsnow0918/03/2026 8:59 PM KARNATAKA 2 Mins Read

ಬೆಂಗಳೂರು: ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಸಂಚಾರ ಪೊಲೀಸರು ಈಗ ಡಿಜಿಟಲ್ ಆಗಿದ್ದಾರೆ. ರಸ್ತೆಯ ಕ್ಯಾಮೆರಾಗಳು ನಿಮ್ಮ ನಿಯಮ ಉಲ್ಲಂಘನೆಯನ್ನು ಪತ್ತೆಹಚ್ಚಿದಾಗ, ನಿಮ್ಮ…

BREAKING: ಹೊಸ ಹಾಡನ್ನು ಬರೆದು ಬಿಡುಗಡೆ: ಸರ್ಸೆ ಸೆರಗ ಸರ್ಸೆ ಹಾಡಿಗೆ ಕ್ಷಮೆಯಾಚಿಸಿ ನಟ ಪ್ರೇಮ್‌

18/03/2026 8:50 PM

ಇನ್ಮುಂದೆ ಸಾಗರ ತಾಲ್ಲೂಕಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ಮನೆಗೆ ಬರಲಿದೆ ದಂಡದ ನೋಟಿಸ್!

18/03/2026 8:37 PM

ರಾಜ್ಯದಲ್ಲಿ ಕಂದಾಯ ಇಲಾಖೆ ಸಿಬ್ಬಂದಿಗೆ ಇಲ್ಲ ಯುಗಾದಿ ರಜೆ: ಹಬ್ಬದ ದಿನವೂ ಕೆಲಸಕ್ಕೆ ಹಾಜರಾಗಲು ಸರ್ಕಾರ ಆದೇಶ

18/03/2026 8:30 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.