ಶಿವಮೊಗ್ಗ : ರಾಜ್ಯದಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು, ಮರಕ್ಕೆ ಗೂಡ್ಸ್ ವಾಹನ ಡಿಕ್ಕಿಯಾಗಿ ಸ್ಥಳದಲ್ಲಿ ಮೂವರು ಸಾವನಪ್ಪಿದ್ದಾರೆ. ಶಿವಮೊಗ್ಗದ ಗೊಂದಿ ಚಟ್ನಿಹಳ್ಳಿ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ.
ಮೃತರನ್ನು ಅಸಾದುಲ್ಲ (35) ಸಾಧಿಕ್ (31) ಫೈರೋಜ್ (33) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ನಿದ್ದೆ ಮಂಪರಿನಲ್ಲಿ ಗೂಡ್ಸ್ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ. ಬಾಳೆಹೊನ್ನೂರಿನಲ್ಲಿ ಕಾರ್ಪೆಂಟರ್ ಕೆಲಸ ಮುಗಿಸಿ ಗೂಡ್ಸ್ ವಾಹನದಲ್ಲಿ ವಾಪಸ್ ಆಗುವ ವೇಳೆ ಈ ಒಂದು ಭೀಕರವಾದ ಅಪಘಾತ ಸಂಭವಿಸಿದೆ.
ಅದೃಷ್ಟ ವಶಾಂತ್ ಚಾಲಕ ಪ್ರಣಾಪಯದಿಂದ ಪಾರಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.








